ಪಾಟ್ನಾ: ಕೋವಿಡ್ನಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ಉಚ್ಚ ನ್ಯಾಯಾಲಯದ ವಿಚಾರಣೆಗಳನ್ನು ವೆಬ್ಕಾಸ್ಟ್ ಅಥವಾ ಆನ್ಲೈನ್ನಲ್ಲಿ ಮಾಡಲಾಗುತ್ತಿದೆ. ಇದೀಗ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯೊಂದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿದೆ.
ಬಿಹಾರದ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆನಂದ್ ಕಿಶೋರ್ ಅವರು ಧರಿಸಿದ್ದ ಉಡುಪಿನಿಂದ ಪಾಟ್ನಾ ಹೈಕೋರ್ಟ್ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಟ್ವಿಟರ್ನಲ್ಲಿ ವೈರಲ್ ಆಗಿದೆ. ನ್ಯಾಯಾಲಯದಲ್ಲಿ ಯಾವ ತರಹದ ಡ್ರೆಸ್ ಕೋಡ್ ಧರಿಸಬೇಕೆಂದು ನಿಮಗೆ ತಿಳಿದಿಲ್ಲವೇ? ನೀವು ಮಸ್ಸೂರಿಯಲ್ಲಿ ಐಎಎಸ್ ತರಬೇತಿ ಶಾಲೆಗೆ ಹೋಗಲಿಲ್ಲವೇ ಎಂದು ಅಧಿಕಾರಿಯನ್ನು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ಬಿಹಾರ ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳಿಗೆ ಏನಾಗಿದೆ? ನ್ಯಾಯಾಲಯಕ್ಕೆ ಹೇಗೆ ಹಾಜರಾಗಬೇಕೆಂದು ನಿಮಗೆ ತರಬೇತಿಯಲ್ಲಿ ತಿಳಿಸಿಲ್ವಾ? ಫಾರ್ಮಲ್ ಡ್ರೆಸ್ ಎಂದರೆ ಕನಿಷ್ಠ ಕೋಟ್ ಮತ್ತು ಕಾಲರ್ ತೆರೆಯಬಾರದು ಎಂಬುದು ತಿಳಿದಿಲ್ಲವಾ ಎಂದು ಐಎಎಸ್ ಅಧಿಕಾರಿಯನ್ನು ನ್ಯಾಯಾಧೀಶರು ತರಾಟೆ ತೆಗೆದುಕೊಂಡಿದ್ದಾರೆ. ಈ ವೇಳೆ ಬೇಸಿಗೆಯಲ್ಲಿ ಕೋಟ್ ಧರಿಸಲು ಯಾವುದೇ ಅಧಿಕೃತ ಕೋಡ್ ಇಲ್ಲ ಎಂದು ಹೇಳುವ ಮೂಲಕ ಆನಂದ್ ಕಿಶೋರ್ ತಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ನ್ಯಾಯಾಧೀಶರು ಈ ವಿವರಣೆಯಿಂದ ಪ್ರಭಾವಿತರಾಗಲಿಲ್ಲ. ಬಳಿಕ ನೀವು ನ್ಯಾಯಾಲಯಕ್ಕೆ ಬಂದಾಗ ಸರಿಯಾದ ಡ್ರೆಸ್ ಕೋಡ್ ಇರಬೇಕು. ಇದು ಸಿನಿಮಾ ಹಾಲ್ ಎಂದು ನೀವು ಭಾವಿಸುತ್ತೀರಾ? ಎಂದು ಅಧಿಕಾರಿ ಮೇಲೆ ಗರಂ ಆದರು.
PublicNext
12/06/2022 09:18 pm