ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೇಂದ್ರ ವಿಭಾಗದ ಡಿಸಿಪಿ ಹುದ್ದೆ 13 ದಿನದಿಂದ ಖಾಲಿ ಇರೋದೇಕೆ ?

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದ್ಯಾ ಅನ್ನೋ ಅನುಮಾನ ಮೂಡಿಸುತ್ತಿದೆ ರಾಜ್ಯ ಸರ್ಕಾರದ ಈಗೀನ ನಡೆ.

ರಾಜಧಾನಿಯ ಕೇಂದ್ರ ವಿಭಾಗಕ್ಕೆ 13 ದಿನಗಳಿಂದ ಡಿಸಿಪಿ ನೇಮಕ ಮಾಡದಿರೋದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

ಕೇಂದ್ರ ವಿಭಾಗದ ಡಿಸಿಪಿ ಸ್ಥಾನವನ್ನ ರಾಜ್ಯ ಸರ್ಕಾರ ಕಳೆದ 13 ದಿನಗಳಿಂದ ಖಾಲಿ ಇಟ್ಟಿದೆ‌. ನಗರದ ಹೃದಯ ಭಾಗದ ವಿಭಾಗಕ್ಕೆ ಡಿಸಿಪಿ ನೇಮಕಕ್ಕೆ ಸರ್ಕಾರ ಏಕೆ ವಿಳಂಬ ಮಾಡ್ತಿದೆ.ಸೂಕ್ತ ಐಪಿಎಸ್ ಅಧಿಕಾರಿಗಳು ಇದ್ದರು ಡಿಸಿಪಿ ಸ್ಥಾನವನ್ನ ಖಾಲಿ ಬಿಟ್ಟಿರುವುದು ಯಾಕೆ ಎಂದು ಜನ ಪ್ರಶ್ನೆಮಾಡ್ತಿದ್ದಾರೆ.

ಇದೇ ತಿಂಗಳು 17 ತಾರೀಖು ಎಂ ಎನ್ ಅನುಚೇತ್ ಕೇಂದ್ರ ಡಿಸಿಪಿ ಸ್ಥಾನದಿಂದ ವರ್ಗಾವಣೆ ಮಾಡಿದ್ದ ಸರ್ಕಾರ ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಡಿಸಿಪಿ ನೇಮಕ ಮಾಡಿಲ್ಲ.

ಸದ್ಯ ಸಿಸಿಬಿ ಡಿಸಿಪಿ ಶರಣಪ್ಪಗೆ ಕೇಂದ್ರ ವಿಭಾಗದ ಉಸ್ತುವಾರಿ ಸರ್ಕಾರ ಕೈಕಟ್ಟಿ ಕುಳಿತಿದೆ. ಕಬ್ಬನ್ ಪಾರ್ಕ್, ಅಶೋಕನಗರ, ವಿಧಾನಸೌಧ ಸದಾಶಿವನಗರ, ಹೈಗ್ರೌಂಡ್ಸ್ ನಂತಹ ಹೆಚ್ಚು ಸೂಕ್ಷ್ಮ ಹಾಗೂ ವಿವಿಐಪಿಗಳಿರುವ ಕೇಂದ್ರ ವಿಭಾಗ ಕಳೆದ 13 ದಿನಗಳಿಂದ ಖಾಯಂ ಡಿಸಿಪಿ ನೇಮಕ ಮಾಡದಿರಲು ವರ್ಗಾವಣೆ ದಂಧೆ ಕಾರಣ ಅನ್ನೋ ಆರೋಪವನ್ನ ಸರ್ಕಾರದ ಮೇಲೆ ಏರಲಾಗಿದೆ‌.ಇಲ್ಲೂ ವರ್ಗಾವಣೆ ದಂಧೆ ನಡೆಯುತ್ತಿದೆಯಾ ಎನ್ನುವ ಅನುಮಾನ ಕಾಡ್ತಿದೆ.

Edited By :
PublicNext

PublicNext

30/05/2022 11:04 am

Cinque Terre

30.02 K

Cinque Terre

0