ಬೆಂಗಳೂರು: ಇತ್ತಿಚೆಗೆ ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ವಿರುದ್ಧ ಸಾಕಷ್ಟು ಆರೋಪ ಹಾಗೂ ವಿವಾದಗಳು ಭುಗಿಲೆದ್ದ ಬೆನ್ನಲ್ಲೇ ರಾಜ್ಯ ಸರ್ಕಾರ ಚನ್ನಣ್ಣವರ್ ಸೇರಿದಂತೆ ಒಟ್ಟು 9 ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ.
ಇದು ನಿಜಕ್ಕೂ ರವಿ ಚನ್ನಣ್ಣನವರ್ ಗೆ ಶಾಕಿಂಗ್ ಸಂಗತಿಯಾಗಿದೆ. ಎಕ್ಸಿಕ್ಯೂಟಿವ್ ಸ್ಥಾನದಿಂದ ನಾನ್-ಎಕ್ಸಿಕ್ಯೂಟಿವ್ ಸ್ಥಾನಕ್ಕೆ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ. ಸಿಐಡಿಯಲ್ಲಿ ಅಧಿಕಾರಿಯಾಗಿದ್ದ ರವಿ ಚನ್ನಣ್ಣನವರ್ ಅವರನ್ನ ಸರ್ಕಾರ ನಿಗಮ ಮಂಡಳಿಗೆ ವರ್ಗಾವಣೆ ಮಾಡಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಈ ರೀತಿ ವರ್ಗಾವಣೆಗೊಂಡಿದ್ದು ಕೇವಲ ರವಿ ಚನ್ನಣ್ಣನವರ್ ಮಾತ್ರವಲ್ಲ, ಅಬ್ದುಲ್ ಅಹಾದ್ ಎಸಿಬಿ ಯಿಂದ ಕೆಎಸ್ಆರ್ಟಿಸಿ ವಿಜಿಲೆನ್ಸ್, ಟಿ. ಶ್ರೀಧರ ಕೊಪ್ಪಳ ಎಸ್.ಪಿ ಯಿಂದ ಡಿಸಿಆರ್ಇ, ದಿವ್ಯಸಾರ ಥಾಮಸ್, ಚಾಮರಾಜನಗರ ಎಸ್.ಪಿ ಯಿಂದ ಪೊಲೀಸ್ ಅಕಾಡೆಮಿಯ ಮೈಸೂರು ಡೆಪ್ಯೂಟಿ ಡೈರೆಕ್ಟರ್ ,ಕಿಶೋರ್ ಬಾಬು, ಬೀದರ್ ಎಸ್ಪಿ ಯಾಗಿ ವರ್ಗಾವಣೆ, ಅರುಣಗಂಶು ಗಿರಿ, ಎಸಿಬಿ ಯಿಂದ ಕೊಪ್ಪಳ ಎಸ್ಪಿಯಾಗಿ ವರ್ಗಾವಣೆ, ಎಲ್.ನಾಗೇಶ್, ಬೀದರ್ ಎಸ್.ಪಿ ಯಿಂದ ಸಿಐಡಿ ಗೆ ವರ್ಗಾವಣೆ, ಟಿ.ಪಿ ಶಿವಕುಮಾರ್, ಚಾಮರಾಜನಗರ ಎಸ್ಪಿಯಾಗಿ ನೇಮಕ
PublicNext
27/01/2022 05:37 pm