ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಲಾಠಿ ಕೊಡಿ'..!- ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಗೆ ಖಾಕಿ ಬೆದರಿಕೆ

ಮಂಡ್ಯ: ತರಗತಿಗೆ ಹಾಜರಾಗಲು ಹಿಜಾಬ್ ಧರಿಸಿ ಮಂಡ್ಯದ ಪಿಇಎಸ್ ಇಂಜನಿಯರಿಂಗ್ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯರನ್ನು ಪೊಲೀಸರು ಗೇಟ್‍ನಲ್ಲೇ ತಡೆದು ಹೊರದೂಡಿದ ಘಟನೆ ನಡೆದಿದೆ.

ಪದವಿ ಕಾಲೇಜುಗಳಿಗೆ ಯಾವುದೇ ಸಮವಸ್ತ್ರ ಧರಿಸಿಕೊಂಡು ಬರಬಹುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದಾರೆ. ಪ್ರಾಂಶುಪಾಲರಿಂದ ಸ್ಪಷ್ಟನೆ ಪಡೆಯಲು ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಮನವಿ ಮಾಡಿದರೂ ಕೇಳದೆ ಬಲವಂತವಾಗಿ ವಾಪಸ್ ಕಳುಹಿಸಲು ಪೊಲೀಸ್ ಮುಂದಾದಾಗ, ವಿದ್ಯಾರ್ಥಿನಿಯರು ಪೊಲೀಸರ ನಡವಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಈ ರೀತಿ ಮೆಂಟಲ್ ಟಾರ್ಚರ್ ನೀಡಿದರೆ ನಾವು ಏನು ಮಾಡಬೇಕು? ಸಾಯಬೇಕಾ?' ಎಂದು ವಿದ್ಯಾರ್ಥಿನಿಯೊಬ್ಬರು ಪೊಲೀಸರ ವರ್ತನೆಯನ್ನು ಪ್ರಶ್ನಿಸಿದ್ದಾರೆ. ಈ ಘಟನೆಯು ಬುಧವಾರ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By : Vijay Kumar
PublicNext

PublicNext

17/02/2022 09:27 pm

Cinque Terre

51.56 K

Cinque Terre

18

ಸಂಬಂಧಿತ ಸುದ್ದಿ