ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಕೆ.ಆರ್. ವೇಣುಗೋಪಾಲ್ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದ್ದ ಏಕಸದಸ್ಯಪೀಠದ ಆದೇಶವನ್ನು ವಿಭಾಗೀಯಪೀಠ ಬುಧವಾರ ಎತ್ತಿಹಿಡಿದಿತ್ತು. ಸದ್ಯ ಇದೇ ವಿಚಾರವಾಗಿ ಮಾತನಾಡಿರುವ ಡಾ.ಕೆ.ಆರ್. ವೇಣುಗೋಪಾಲ್ ಅವರು, 'ರಾಜ್ಯಪಾಲರ ನಿರ್ದೇಶನಕ್ಕಾಗಿ ಕಾಯುತ್ತಿದ್ದೇನೆ. ತಾಂತ್ರಿಕವಾಗಿ ಈಗ ನಾನು ಯಾವುದೇ ಅಧಿಕಾರ ಹೊಂದಿಲ್ಲ. ನಾನು ಏನೂ ತಪ್ಪು ಮಾಡಿಲ್ಲ. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇನೆ' ಎಂದು ಹೇಳಿದ್ದಾರೆ.
'ವಿದ್ಯಾರ್ಥಿ ದೆಸೆಯಿಂದಲೂ ಇಲ್ಲಿಯವರೆಗೆ ಸುಮಾರು 48 ವರ್ಷಗಳ ಕಾಲ ವಿಶ್ವವಿದ್ಯಾಲಯದ ಜತೆ ಸಂಬಂಧ ಹೊಂದಿದ್ದೇನೆ. ಅರ್ಹತೆ ಆಧಾರದ ಮೇಲೆ ಈ ಹುದ್ದೆಗೆ ಬಂದಿದ್ದೇನೆ. ಈ ರೀತಿಯ ಕಷ್ಟಗಳನ್ನು ಜೀವನದಲ್ಲಿ ಹಲವು ಬಾರಿ ಎದುರಿಸಿದ್ದೇನೆ. ಕಷ್ಟಗಳು ಬಂದಾಗ ಒಳ್ಳೆಯ ವ್ಯಕ್ತಿಗಳೇ ನನಗೆ ಬೆಂಬಲ ನೀಡಿದ್ದಾರೆ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ತೊಂದರೆ ಕೊಟ್ಟವರಿಗೂ ಒಳ್ಳೆಯದನ್ನೇ ಮಾಡಿದ್ದೇನೆ' ಎಂದು ಹೇಳಿದ್ದಾರೆ.
PublicNext
20/03/2022 01:41 pm