ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ಗದ್ದಲದಲ್ಲಿ ಕಾಣದ ಕೈಗಳ ಕೈವಾಡವಿದೆ : ಹೈಕೋರ್ಟ್

ಬೆಂಗಳೂರು : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಸಮವಸ್ತ್ರದ ಸಮರಕ್ಕೆ ಸಂಬಂಧಿಸಿದಂತೆ ಮಾ.15 ರಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಇನ್ನು ಐತಿಹಾಸಿಕ ತೀರ್ಪು ಪ್ರಕಟಿಸಿದ ಕೋರ್ಟ್ ಕೆಲವು ಮಹತ್ವದ ಮಾಹಿತಿಯನ್ನು ಹೊರಹಾಕಿದೆ. ರಾಜ್ಯದಲ್ಲಿ ಹಿಜಾಬ್ ನ ಇಡೀ ಪ್ರಕರಣ ಗಮನಿಸಿರುವ ಕೋರ್ಟ್, ಸಾಮಾಜಿಕ ಅಶಾಂತಿ ಮತ್ತು ಅಸಂಗತತೆಯನ್ನು ರೂಪಿಸಲು ಕೆಲವು "ಕಾಣದ ಕೈಗಳು" ಕೆಲಸ ಮಾಡಿವೆ ಎನ್ನುವುದನ್ನೂ ನಂಬಬೇಕಾಗಿದೆ ಎಂದು ಹೇಳಿದೆ.

ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಹಿಜಾಬ್ ಅನ್ನು ಪ್ರಶ್ನಿಸುವ ವಿವಿಧ ಅರ್ಜಿಗಳನ್ನು ವಜಾಗೊಳಿಸುವ ವೇಳೆ ಈ ಅಭಿಪ್ರಾಯವನ್ನು ನೀಡಿದೆ.

"ಹಿಜಾಬ್ ಪ್ರಕರಣ ತೆರೆದುಕೊಂಡ ವಿಧಾನವು ಸಾಮಾಜಿಕ ಅಶಾಂತಿ ಮತ್ತು ಅಸಂಗತತೆಯನ್ನು ಹುಟ್ಟಿಹಾಕಲು ಕೆಲವು ಕಾರಣದ ಕೈಗಳು ಕೆಲಸ ಮಾಡಿವೆ ಎನ್ನುವ ವಾದಕ್ಕೆ ಅವಕಾಶ ನೀಡಿದೆ" ಎಂದು ಕರ್ನಾಟಕ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹಠಾತ್ ಆಗಿ ಹಿಜಾಬ್ ಎನ್ನುವ ವಿಚಾರ ಉದ್ಭವಿಸಲು ಹೇಗೆ ಸಾಧ್ಯ. ಇದು ಕೆಲ ದಿನಗಳಲ್ಲಿಯೇ ವ್ಯಾಪಕವಾಗಿ ಪ್ರಚಾರ ಪಡೆದುಕೊಂಡಿರುವ ರೀತಿಯೂ ನಮಗೆ ದಿಗ್ಭ್ರೆಮೆ ಮೂಡಿಸಿದೆ ಎಂದು ಹೇಳಿದೆ.

ಇನ್ನು ಈ ಕಾನದ ಕೈಗಳ ಬಗ್ಗೆ ವಿಳಂಬವಿಲ್ಲದೆ ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಹೇಳಿದೆ.

Edited By : Nirmala Aralikatti
PublicNext

PublicNext

16/03/2022 07:53 am

Cinque Terre

93.36 K

Cinque Terre

26

ಸಂಬಂಧಿತ ಸುದ್ದಿ