ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೈಲಿನಲ್ಲಿ ಹನುಮಾನ್ ಚಾಲೀಸಾ ಓಕೆ, ಮನೆ ಊಟಕ್ಕಿಲ್ಲ ಅವಕಾಶ: ಷೇರು ಪೇಟೆಯ 'ರಾಣಿ'ಗೆ ಕೋರ್ಟ್ ಸೂಚನೆ

ನವದೆಹಲಿ: ಮಾರ್ಕೆಟ್ ಮ್ಯಾನಿಪುಲೇಷನ್ ಹಗರಣ ಸಂಬಂಧ ರಾಷ್ಟ್ರೀಯ ಷೇರು ಮಾರುಕಟ್ಟೆ (ಎನ್‌ಎಸ್‌ಇ) ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಮತ್ತೆ 14 ದಿನಗಳ ಅವಧಿಗೆ ಜೈಲಿಗಟ್ಟಿದೆ.

ಈ ಹಿಂದೆ 7 ದಿನಗಳ ಕಾಲ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ಕಸ್ಟಡಿಗೆ ನೀಡಲಾಗಿತ್ತು. ಇದೀಗ ಸಿಬಿಐ ವಿಶೇಷ ನ್ಯಾಯಾಲಯ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಚಿತ್ರಾ ರಾಮಕೃಷ್ಣ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಸಿಬಿಐ ತನ್ನ ಕಸ್ಟಡಿಯನ್ನು ಕೇಳುವುದಿಲ್ಲ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದರು. ಆದರೆ ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ ಸಿಬಿಐ, ಆಕೆ ಪ್ರಭಾವಿ ವ್ಯಕ್ತಿಯಾಗಿದ್ದು, ವಿದೇಶಿ ಭೇಟಿ ಮತ್ತು ಪ್ರಕರಣದ ಇತರ ಅಂಶಗಳ ಕುರಿತು ತನಿಖೆ ಇನ್ನೂ ಪ್ರಗತಿಯಲ್ಲಿದೆ. ಆದ್ದರಿಂದ ನಾವು ಚಿತ್ರಾ ರಾಮಕೃಷ್ಣರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಬೇಕೆಂದು ಬಯಸುತ್ತೇವೆ" ಎಂದು ಕೋರ್ಟ್‌ಗೆ ಮನವಿ ಮಾಡಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಅನುಮೋದನೆ ನೀಡಿದೆ. ಇದೇ ವೇಳೆ ಮನೆ ಆಹಾರ ಹಾಗೂ ಇತರ ಸೌಲಭ್ಯಗಳಿಗಾಗಿ ಮಾಡಿದ್ದ ಮನವಿಯನ್ನು ಕೋರ್ಟ್‌ ನಿರಾಕರಿಸಿದೆ. "ಪ್ರತಿಯೊಬ್ಬ ಖೈದಿಯೂ ಸಮಾನರಾಗಿದ್ದಾರೆ. ಆಕೆ ಏನಾಗಿದ್ದರೋ ಆ ಕಾರಣಕ್ಕೆ ವಿಐಪಿ ಖೈದಿಯಾಗಲು ಸಾಧ್ಯವಿಲ್ಲ. ನಿಯಮಗಳನ್ನು ಬದಲಾಯಿಸಲಾಗುವುದಿಲ್ಲ" ಎಂದು ನ್ಯಾಯಾಧೀಶ ಸಂಜೀವ್ ಅಗರ್ವಾಲ್ ಹೇಳಿದ್ದಾರೆ. ಆದರೆ ನ್ಯಾಯಾಲಯವು ಆಕೆಗೆ ಹನುಮಾನ್ ಚಾಲೀಸಾ ಪ್ರಾರ್ಥನಾ ಪುಸ್ತಕದ ಪ್ರತಿಯನ್ನು ಕೊಂಡೊಯ್ಯಲು ಅನುಮತಿ ನೀಡಿದೆ.

Edited By : Vijay Kumar
PublicNext

PublicNext

14/03/2022 05:49 pm

Cinque Terre

87.56 K

Cinque Terre

1

ಸಂಬಂಧಿತ ಸುದ್ದಿ