ತುಮಕೂರು: ತುತ್ತು ಅನ್ನ ಅರಸಿ ಬದುಕಿನ ಬಾಳ ಬಂಡಿ ಸಾಗಿಸಲು ಬೆಂಗಳೂರು ಕಡೆ ತೆರಳುತ್ತಿದ್ದ ಬಡವರ ಬದುಕನ್ನು ಬೆಳ್ಳಂಬೆಳಿಗ್ಗೆ ಜವರಾಯ ಕಸಿದಿದ್ದಾನೆ.
ಜಿಲ್ಲೆಯ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಸಮೀಪದ ಬಾಳೇನಹಳ್ಳಿ ಬಳಿ ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದು ಸ್ಥಳದಲ್ಲೇ 9 ಜನ ಮೃತಪಟ್ಟಿದ್ದು ಉಳಿದವರು ಗಾಯಗೊಂಡಿದ್ದಾರೆ. ಕ್ರೂಸರ್ ವಾಹನದಲ್ಲಿ ರಾಯಚೂರು ಹಾಗೂ ಮಾನ್ವಿಯ 23 ಜನರು ಕೂಲಿ ಕೆಲಸ ಅರಸಿ ಬೆಂಗಳೂರು ಕಡೆ ಪ್ರಯಾಣ ಬೆಳಸುತ್ತಿದ್ದರು. ಗುರುವಾರ ನಸುಕಿನಲ್ಲಿ ಈ ಅವಘಡ ಸಂಭವಿಸಿದ್ದು, ಬದುಕಿನ ಬಾಳಬಂಡಿ ನಡೆಸಲು ಹೊರಟಿದ್ದವರು ಜವರಾಯನ ಪಾದ ಸೇರಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಕಳ್ಳಂಬೆಳ್ಳ ಬಳಿ ಕಾರು ಅಪಘಾತವಾಗಿ ತಂದೆ ಮಕ್ಕಳು ಮೃತಪಟ್ಟಿದ್ದರು. ಸ್ಥಳಕ್ಕೆ ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಶಹಾಪುರವಾಡ್ ಭೇಟಿ ನೀಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
PublicNext
25/08/2022 08:19 am