ಬೆಳಗಾವಿ- ಕನ್ನಡ ಪರ ಕಾರ್ಯಕರ್ತರು ನಿನ್ನೆ ಕನ್ನಡ ರಾಜ್ಯೋತ್ಸವದಂದು ಒಳ್ಳೆ ಹುರುಪಿನಲ್ಲಿದ್ದರು. ಅದರಲ್ಲೂ ಗಡಿನಾಡು ಅಂದರೆ ಕೇಳಬೇಕಾ? ಅಲ್ಲಿನ ಹೋರಾಟಗಾರರು ನಿನ್ನೆ ಹೊಸ ಉತ್ಸಾಹದಲ್ಲಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕನ್ನಡ ರಾಜ್ಯೋತ್ಸವದ ದಿನವಾದ ನಿನ್ನೆ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಹುಮ್ಮಸ್ಸಿನ ತಯಾರಿ ನಡೆಸಿದ್ದರು. ನಗರದ ಎರಡು ವೃತ್ತಗಳಲ್ಲಿ ಪ್ರತಿಮೆ ಸ್ಥಾಪಿಸಲು ಪೂರ್ವನಿರ್ಧಾರವಾಗಿತ್ತು. ಅದಕ್ಕಾಗಿ ಕಲಾವಿದ ಮಹೇಶ್ ಮಾಸೇಕರ್ ಅವರಿಂದ ರಾಯಣ್ಣನ ಪ್ರತಿಮೆಗಳೂ ತಯಾರಾಗಿದ್ದವು.
ಈ ವಿಷಯ ತಿಳಿದ ಬೆಳಗಾವಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ರಾಯಣ್ಣನ ಪ್ರತಿಮೆಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಪ್ರತಿಮೆಗಳನ್ನು ಕೊಡುವಂತೆ ಮನವಿ ಮಾಡಿದ ಕರವೇ ಕಾರ್ಯಕರ್ತರಿಗೆ ಲಾಠಿ ರುಚಿ ಉಣಿಸಿದ್ದಾರೆ ಎನ್ನಲಾಗಿದೆ.
ಆದ್ರೆ ಪ್ರತಿಮೆ ಸ್ಥಾಪನೆಗೂ ಮುನ್ನ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ.
PublicNext
02/11/2020 03:10 pm