ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ಆಲೂ-ಕ್ಯಾಪ್ಸಿಕಂ ಮಸಾಲ’

ಆಲೂ – ಕ್ಯಾಪ್ಸಿಕಂ ಮಸಾಲ ಮಾಡವುದು ತುಂಬಾ ಸುಲಭ

ಮೊದಲಿಗೆ 1 ಕ್ಯಾಪ್ಸಿಕಂ ಹಾಗೂ 3 ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ¼ ಕಪ್ ತೆಂಗಿನಕಾಯಿ ತುರಿ, 1 ಹಸಿಮೆಣಸು, ಸಣ್ಣ ತುಂಡು ಚಕ್ಕೆ, 1 ಲವಂಗ, 1 ಏಲಕ್ಕಿ, ¼ ಟೀ ಸ್ಪೂನ್ ಸೋಂಪು, ಸ್ವಲ್ಪ ಕೊತ್ತಂಬರಿಸೊಪ್ಪು, 3 ಒಣಮೆಣಸು, 5 ಎಸಳು ಬೆಳ್ಳುಳ್ಳಿ, ಸಣ್ಣ ತುಂಡು ಶುಂಠಿ ಹಾಕಿ ನೀರು ಸೇರಿಸಿ ರುಬ್ಬಿಕೊಳ್ಳಿ.

ನಂತರ ಗ್ಯಾಸ್ ಮೇಲೆ ಕುಕ್ಕರ್ ಇಟ್ಟು ಅದಕ್ಕೆ 1 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಸಾಸಿವೆ ಹಾಕಿ ನಂತರ ಒಂದು ಈರುಳ್ಳಿ ಕತ್ತರಿಸಿಕೊಂಡು ಹಾಕಿ ಕೆಂಪಾಗುವವರೆಗೆ ಫ್ರೈ ಮಾಡಿ. ಇದಕ್ಕೆ 1 ದೊಡ್ಡ ಗಾತ್ರದ ಟೊಮೆಟೊ ಕೂಡ ಕತ್ತರಿಸಿ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ.

ನಂತರ ಚಿಟಿಕೆ ಅರಿಶಿನ, ಉಪ್ಪು, 1 ಚಮಚದಷ್ಟು ಸಾಂಬಾರು ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕತ್ತರಿಸಿಟ್ಟುಕೊಂಡ ಆಲೂಗಡ್ಡೆ ಹಾಗೂ ಕ್ಯಾಪ್ಸಿಕಂ ಅನ್ನು ಹಾಕಿ ಫ್ರೈ ಮಾಡಿ. ಇದಕ್ಕೆ ¼ ಕಪ್ ನೀರು ಸೇರಿಸಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ರುಬ್ಬಿದ ಮಿಶ್ರಣ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ. ತುಂಬಾ ತೆಳುವಾಗಿ ಈ ಮಿಶ್ರಣವನ್ನು ಮಾಡಬೇಡಿ.ನಂತರ ಕುಕ್ಕರ್ ಮುಚ್ಚಿ 1 ವಿಷಲ್ ಕೂಗಿಸಿಕೊಳ್ಳಿ. ರುಚಿಕರವಾದ ಆಲೂ-ಕ್ಯಾಪ್ಸಿಕಂ ಮಸಾಲ ರೆಡಿ.

Edited By : Nirmala Aralikatti
PublicNext

PublicNext

11/07/2022 02:21 pm

Cinque Terre

19.79 K

Cinque Terre

0