ಮದುವೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಹೆಣ್ಣು ಮಕ್ಕಳಿಗೆ ಮೆಹೆಂದಿ ಬೇಕೇ ಬೇಕು. ಕೈಗಳನ್ನು ಕಂಗೊಳಿಸುವಂತೆ ಮಾಡುವ ಈ ಮದರಂಗಿ ಸೊಪ್ಪಿನಲ್ಲಿ ಕೆಲ ಔಷಧೀಯ ಗುಣಗಳಿವೆ.
* ಮೆಹೆಂದಿ ಸೊಪ್ಪನ್ನು ಅರೆದು ಅದಕ್ಕೆ ನಿಂಬೆರಸ ಸೇರಿಸಿ ಅಂಗೈ ಅಂಗಾಲುಗಳಿಗೆ ಹಚ್ಚಿದರೆ ಉರಿ ಕಡಿಮೆಯಾಗುತ್ತದೆ.
* ಮೆಹಂದಿ ಎಲೆಗಳನ್ನು ಅರೆದು ಅದರ ಪೇಸ್ಟ್ ಗೆ ಕರ್ಪೂರ ಸೇರಿಸಿ ತಲೆಗೆ ಹಚ್ಚಿದರೆ ಹೇನು ಸೀರು ನಾಶವಾಗುತ್ತದೆ.
* ಗೋರಂಟಿ ಕಾಯಿಗಳನ್ನು ಚೆನ್ನಾಗಿ ಅರೆದು ನೀರು ಬೆರೆಸಿ ಕಷಾಯ ಮಾಡಿ ಅದಕ್ಕೆ 25 ಗ್ರಾಂ ನೀಲಿ ದ್ರಾಕ್ಷಿ ಹಾಕಿ ನುಣ್ಣಗೆ ರುಬ್ಬಿಕೊಂಡು ತಲೆಗೆ ಹಚ್ಚಿ ಸ್ನಾನ ಮಾಡಿದರೆ ಬಿಳಿ ಕೂದಲು ಕಡಿಮೆಯಾಗುತ್ತದೆ.
* ಎರಡು ಹಿಡಿ ಗೋರಂಟಿ ಸೊಪ್ಪನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ನೆನೆಹಾಕಿ ಆ ನೀರನ್ನು ಶುಭ್ರ ಬಟ್ಟೆಯಲ್ಲಿ ಶೋಧಿಸಿ ದಿನಕ್ಕೆ ಒಂದು ಬಾರಿ ಏಳು ದಿನ ಕುಡಿದರೆ ಕಾಮಾಲೆ ನಿಯಂತ್ರಣಕ್ಕೆ ಬರುತ್ತದೆ.
* ಮದರಂಗಿ ಎಲೆಯ ರಸಕ್ಕೆ ಚಿಟಿಕೆ ಸುಣ್ಣ ಬೆರೆಸಿ ಸೇವಿಸಿದರೆ ತಲೆಸುತ್ತು ಕಡಿಮೆಯಾಗುತ್ತದೆ.
* ಗೋರಂಟಿ ಬೀಜದ ಪುಡಿಗೆ ಶುದ್ಧ ಜೇನು ಬೆರೆಸಿ ಸೇವಿಸಿದರೆ ತಲೆಸುತ್ತು ಕಡಿಮೆಯಾಗುತ್ತದೆ.
* ಹಸಿ ಗೋರಂಟಿ ಸೊಪ್ಪನ್ನು ಜಜ್ಜಿ ಉಂಡೆ ಮಾಡಿ ಹಲ್ಲು ನೋವಿರುವ ಜಾಗಕ್ಕೆ ಇಟ್ಟರೆ ನೋವು ಕಡಿಮೆಯಾಗುತ್ತದೆ.
* ಚರ್ಮವ್ಯಾದಿಗಳಿಗೆ ಹಾಗೂ ಬೆವರುಸಾಲೆಗೆ ಗೋರಂಟಿಯ ರಸ ಹಚ್ಚಬಹುದು.
PublicNext
14/06/2022 03:51 pm