ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತೆ ‘ಐಸ್ ಕ್ಯೂಬ್ʼ

ಸಾಮಾನ್ಯವಾಗಿ ಬ್ಯೂಟಿ ಪಾರ್ಲರ್ ಗಳಲ್ಲಿರುವ ಫೇಶಿಯಲ್, ದುಬಾರಿ ವಸ್ತುಗಳಿಗಿಂತ ಐಸ್ ಹೆಚ್ಚು ಪರಿಣಾಮಕಾರಿ. ಇದು ನೈಸರ್ಗಿಕವಾಗಿ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮುಖಕ್ಕೆ ಐಸ್ ಕ್ಯೂಬ್ ಇಟ್ಟು ಮಸಾಜ್ ಮಾಡುವುದ್ರಿಂದ ಮುಖದ ಚರ್ಮದಲ್ಲಿರುವ ಕೊಳಕು ಹೊರ ಬರುತ್ತದೆ. ಆದ್ರೆ ಎಂದೂ ಐಸ್ ಕ್ಯೂಬನ್ನು ನೇರವಾಗಿ ಮುಖದ ಮೇಲೆ ಇಡಬಾರದು. ಸ್ವಚ್ಛ ಕಾಟನ್ ಬಟ್ಟೆಯಲ್ಲಿ ಐಸ್ ಕ್ಯೂಬ್ ಇಟ್ಟು ಅದನ್ನು ಮುಖದ ಮೇಲೆ ನಿಧಾನವಾಗಿ ಉಜ್ಜಬೇಕು.

ಮೊದಲು ಮುಖವನ್ನು ತೊಳೆದು ಸ್ವಚ್ಛ ಬಟ್ಟೆಯಲ್ಲಿ ಕ್ಲೀನ್ ಮಾಡಿಕೊಳ್ಳಿ. ನಂತ್ರ ಕಾಟನ್ ಬಟ್ಟೆಯಲ್ಲಿ ಐಸ್ ಕ್ಯೂಬ್ ಇಟ್ಟು ಮಸಾಜ್ ಮಾಡಿ. ಇದು ಚರ್ಮದ ರಂಧ್ರಗಳನ್ನು ಮುಚ್ಚಿ ಚರ್ಮದ ಬಣ್ಣ ಬದಲಾಗಲು ಕಾರಣವಾಗುತ್ತದೆ. ಬೇಸಿಗೆಯಲ್ಲಿ ಕಾಡುವ ಕಪ್ಪು ಕಲೆ ಕಡಿಮೆಯಾಗುತ್ತದೆ.

ಚರ್ಮದ ಉರಿಯೂತವನ್ನು ಐಸ್ ಕ್ಯೂಬ್ ಕಡಿಮೆ ಮಾಡುತ್ತದೆ. ಕಣ್ಣಿನ ಉರಿ ಕಡಿಮೆ ಮಾಡಲು ಕೂಡ ಐಸ್ ಕ್ಯೂಬ್ ಬಳಸಲಾಗುತ್ತದೆ. ಆದ್ರೆ ಕಣ್ಣಿನ ಮೇಲೆ ಕೆಲ ಸೆಕೆಂಡುಗಳ ಕಾಲ ಮಾತ್ರ ಬಟ್ಟೆಯಲ್ಲಿ ಸುತ್ತಿದ ಐಸ್ ಕ್ಯೂಬ್ ಇಡಬೇಕು. ತುಂಬಾ ಹೊತ್ತು ಕಣ್ಣಿನ ಮೇಲಿದ್ದರೆ ಅಪಾಯ.

ಮುಖದ ಸುಕ್ಕು ತಡೆಯಲು ಐಸ್ ಕ್ಯೂಬ್ ಸಹಾಯಕಾರಿ. ಐಸ್ ಕ್ಯೂಬ್ ಗೆ ಜಾಸ್ಮಿನ್ ಎಣ್ಣೆಯ ಹನಿ ಹಾಕಿ ಬಟ್ಟೆಯಲ್ಲಿ ಸುತ್ತಿ ಮುಖಕ್ಕೆ ಮಸಾಜ್ ಮಾಡಬೇಕು. ಕಿತ್ತಳೆ ಅಥವಾ ನಿಂಬೆ ರಸವನ್ನು ಹಾಕಿ ಮಸಾಜ್ ಮಾಡಿದ್ರೂ ಸುಕ್ಕು ಕಡಿಮೆಯಾಗುತ್ತದೆ.

Edited By : Nirmala Aralikatti
PublicNext

PublicNext

31/05/2022 03:22 pm

Cinque Terre

14.89 K

Cinque Terre

0