ಬೇಕಾಗುವ ಸಾಮಗ್ರಿಗಳು
ಅರ್ಧ ಕೆಜಿ ತೊಂಡೆ ಕಾಯಿ, ಈರುಳ್ಳಿ ಅರ್ಧ ಕಪ್, ಬೆಳ್ಳುಳ್ಳಿ 8 ಎಸಳು, ಜೀರಿಗೆ ಕಾಳು ಅರ್ಧ ಚಮಚ, ಬಿಳಿ ಎಳ್ಳು 2 ಟೀ ಸ್ಪೂನ್, ದನಿಯಾ ಕಾಳು 2 ಟೀ ಸ್ಪೂನ್, ತೆಂಗಿನಕಾಯಿ ಪುಡಿ 2 ಟೀ ಸ್ಪೂನ್, ಅರಿಶಿನ ಅರ್ಧ ಟೀ ಸ್ಪೂನ್, ಉಪ್ಪು 1 ವರೆ ಚಮಚ, ಒಣ ಮೆಣಸಿನಕಾಯಿ 8.
ತೊಂಡೆಕಾಯಿ ಡ್ರೈ ಫ್ರೈ ಮಾಡುವ ವಿಧಾನ
ಮೊದಲಿಗೆ ಒಂದು ಪ್ಯಾನ್ ಇಟ್ಟು ಅರ್ಧ ಚಮಚ ಜೀರಿಗೆ ಕಾಳು, 2 ಟೀ ಸ್ಪೂನ್ ಬಿಳಿ ಎಳ್ಳು, 2 ಟೀ ಸ್ಪೂನ್ ದನಿಯಾ ಕಾಳುಗಳನ್ನು ಹುರಿದುಕೊಳ್ಳಬೇಕು. ಇದಕ್ಕೆ ಕೆಂಪುಮೆಣಸಿನ ಕಾಯಿ ಸೇರಿಸಿ ಫ್ರೈ ಮಾಡಿಕೊಳ್ಳಿ. ಬಳಿಕ 2 ಟೀ ಸ್ಪೂನ್ ತೆಂಗಿನಪುಡಿ ಹಾಕಿ ಹುರಿದುಕೊಳ್ಳಿ. ನಂತರ ಸ್ಟೌ ಆಫ್ ಮಾಡಿ ಈ ಮಿಶ್ರಣ ತಣ್ಣಗಾಗಲು ಬಿಡಿ.
ಬಳಿಕ ಒಂದು ಮಿಕ್ಸಿ ಜಾರಿಗೆ ಈ ಮಿಶ್ರಣವನ್ನು ಹಾಕಿಕೊಂಡು ಜೊತೆಗೆ 7-8 ಬೆಳ್ಳುಳ್ಳಿ ಎಸಳು ಸೇರಿಸಿ ಡ್ರೈ ಪುಡಿ ಮಾಡಿಕೊಳ್ಳಿ. ನಂತರ ಒಂದು ಪ್ಯಾನ್ ಇಟ್ಟು 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಅರ್ಧ ಚಮಚ ಅರಿಶಿನ ಸೇರಿಸಿ ಮಿಕ್ಸ್ ಮಾಡಿ. ಬಳಿಕ ವೃತ್ತಾಕರದಲ್ಲಿ ಹೆಚ್ಚಿಕೊಂಡ ತೊಂಡೆಕಾಯಿ ಸೇರಿಸಿ ಫ್ರೈ ಮಾಡಿಕೊಳ್ಳಿ.
ತೊಂಡೆಕಾಯಿ ಅರ್ಧ ಬೆಂದ ನಂತರ 1 ವರೆ ಚಮಚ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಪುನಃ ಬೇಯಿಸಿಕೊಳ್ಳಿ. ಹೀಗೆ ತೊಂಡೆಕಾಯಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ರುಬ್ಬಿಕೊಂಡಿರುವ ಮಿಶ್ರಣ ಸೇರಿಸಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿಕೊಂಡ್ರೆ ತೊಂಡೆಕಾಯಿ ಡ್ರೈ ಫ್ರೈ ಸವಿಯಲು ಸಿದ್ಧ.
PublicNext
06/05/2022 03:21 pm