ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚನ್ನ ಸಲಾಡ್ ತಯಾರಿಸುವುದು ಬಲು ಸುಲಭ

ಚನ್ನ ಅಥವಾ ಬಿಳಿಕಡಲೆಯ ಚಾಟ್ ನಿಮಗೆ ಒಂದು ಊಟದಷ್ಟೇ ಪೋಷಕಾಂಶಗಳನ್ನು ನೀಡುತ್ತದೆ. ಒಂದು ವೇಳೆ ನೀವು ಡಯೆಟ್ ನಲ್ಲಿ ಇದ್ರೆ ಚನ್ನ ಚಾಟ್ ನಿಮಗೆ ಪ್ರಯೋಜನಕಾರಿ. ಒಂದು ಬೌಲ್ ಚನ್ನವನ್ನು ನೀರಿನಲ್ಲಿ ನೆನೆಹಾಕಿ. ಈಗ ಒಂದು ಮಿಕ್ಸಿ ಜಾರ್ಗೆ ಅರ್ಧ ಕಪ್ ಪುದೀನಾ ಎಲೆ, ಎರಡು ಬೆಳ್ಳುಳ್ಳಿ ಎಸಳು, ಅರ್ಧ ಕಪ್ ಮೊಸರು, ಕಾಲು ಚಮಚ ಕರಿಮೆಣಸಿನ ಕಾಳು, ಸ್ವಲ್ಪ ಉಪ್ಪು, ಒಂದು ಸ್ಪೂನ್ ಆಲಿವ್ ಆಯಿಲ್ ಸೇರಿಸಿ ಮಿಕ್ಸಿ ಮಾಡಿಕೊಳ್ಳಬೇಕು.

ನಂತರ ಕುಕ್ಕರ್ಗೆ ಒಂದೂವರೆ ಲೀಟರ್ ನೀರು ಹಾಕಿಕೊಳ್ಳಿ. ಇದಕ್ಕೆ ನೆನೆಸಿಟ್ಟ ಚನ್ನವನ್ನು ಕಾಳುಗಳನ್ನು ಸೇರಿಸಿ 3-4 ವಿಶಲ್ ಬರಿಸಿಕೊಳ್ಳಬೇಕು.

ನಂತರ ಚನ್ನವನ್ನು ತೆಗೆದು ಒಂದು ಬೌಲ್ಗೆ ಹಾಕಿಕೊಳ್ಳಬೇಕು.ಬಳಿಕ ಇದಕ್ಕೆ ಹೆಚ್ಚಿಕೊಂಡ ಅರ್ಧ ಕಪ್ ಈರುಳ್ಳಿ, ಅರ್ಧ ಕಪ್ ಸೌತೆಕಾಯಿ ಹೋಳು, ಅರ್ಧ ಕಪ್ ಬೇಯಿಸಿಕೊಂಡ ಆಲೂಗೆಡ್ಡೆ ಹೋಳುಗಳು. ಅರ್ಧ ಹೆಚ್ಚಿಟ್ಟುಕೊಂಡ ಟೊಮ್ಯಾಟೊ ಸೇರಿಸಿಕೊಳ್ಳಬೇಕು.

ಬಳಿಕ ರುಬ್ಬಿಟ್ಟುಕೊಂಡಿರುವ ಪುದೀನಾ ಮಿಶ್ರಣವನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಬಳಿಕ 1 ಚಮಚ ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿದ್ರೆ ಚನ್ನ ಚಾಟ್ ಸವಿಯಲು ಸಿದ್ಧ.

Edited By : Nirmala Aralikatti
PublicNext

PublicNext

03/05/2022 03:09 pm

Cinque Terre

13.97 K

Cinque Terre

0