ಎಲ್ಲರೂ ತೆಳಗೆ ಬೆಳ್ಳಗೆ ಇರಬೇಕು ಎನ್ನುವ ಆಸೆ ಇರುತ್ತದೆ. ಹಾಗಾಗಿ ಕೆಲವರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಬೆಳ್ಳನೆಯ ತ್ವಚೆಗಾಗಿ ಕೃತಕ ಬಣ್ಣಗಳ ಬದಲು ನಿಮ್ಮ ತ್ವಚೆ ನೈಸರ್ಗಿಕವಾಗಿ ಕಾಂತಿಯುಕ್ತವಾಗಿಡಲು ಈ ಕೆಳಕಂಡ ವಿಧಾನ ಅನುಸರಿಸಿ.
2 ಬೆಟ್ಟದ ನೆಲ್ಲಿಕಾಯಿ ತಿರುಳನ್ನು ತೆಗೆದುಕೊಳ್ಳಿ. ಇದಕ್ಕೆ 1 ಪಪ್ಪಾಯಿ ಹಣ್ಣಿನ ಹೋಳನ್ನು ಸೇರಿಸಿ ಮಿಕ್ಸಿ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ಮುಖಕ್ಕೆ ಲೇಪಿಸಿ ಮಸಾಜ್ ಮಾಡಿಕೊಳ್ಳಿ.
10-15 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ. ವಾರಕ್ಕೆರಡು ಮೂರು ಬಾರಿ ಈ ಪ್ಯಾಕ್ ಹಾಕಿಕೊಳ್ಳುವುದರಿಂದ ಗೌರವರ್ಣ ನಿಮ್ಮದಾಗುತ್ತದೆ.
PublicNext
25/04/2022 01:17 pm