ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ಹೆಸರುಬೇಳೆ ಕೋಸಂಬರಿ’

ಬೇಕಾಗುವ ಸಾಮಗ್ರಿಗಳು:

ಸೌತೆಕಾಯಿ 1, ¼ ಕಪ್ ಹೆಸರುಬೇಳೆ, 2 ಹಸಿಮೆಣಸು-ಸಣ್ಣಗೆ ಹಚ್ಚಿಟ್ಟುಕೊಂಡಿದ್ದು, 1 ಟೇಬಲ್ ಸ್ಪೂನ್ –ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಲಿಂಬೆಹಣ್ಣಿನ ರಸ-ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:

ಮೊದಲಿಗೆ ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ನೀರನ್ನು ಬಸಿದುಕೊಂಡು ½ ಕಪ್ ನೀರಿನಲ್ಲಿ 30 ನಿಮಿಷಗಳ ಕಾಲ ಈ ಹೆಸರುಬೇಳೆಯನ್ನು ನೆನೆಸಿ. ನಂತರ ಸೌತೆಕಾಯಿಯ ಸಿಪ್ಪೆ ತೆಗೆದು ಅದನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ.

ನಂತರ ಹೆಸರುಬೇಳೆಯ ನೀರನ್ನು ಬಸಿದುಕೊಂಡು ಅದಕ್ಕೆ ಸೌತೆಕಾಯಿ, ಹಸಿಮೆಣಸು, ಕೊತ್ತಂಬರಿಸೊಪ್ಪು, ಉಪ್ಪು, ಲಿಂಬೆಹಣ್ಣಿನ ರಸ , ತೆಂಗಿನಕಾಯಿ ತುರಿ ಸೇರಿಸಿ ಮಿಕ್ಸ್ ಮಾಡಿ ಸರ್ವ್ ಮಾಡಿ.

Edited By : Nirmala Aralikatti
PublicNext

PublicNext

02/03/2022 06:28 pm

Cinque Terre

24.83 K

Cinque Terre

1