ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೌವನ ವೃದ್ಧಿಗೆ ಈ 5 ಜ್ಯೂಸ್..

ಫಿಟ್ ಆ್ಯಂಡ್ ಫೈನ್ ಆಗಿ ಕಾಣಬೇಕು ಎನ್ನುವುದು ಎಲ್ಲರ ಆಸೆ. ಇದಕ್ಕೆ ವ್ಯಾಯಾಮ, ಡಯಟ್ ಜೊತೆಗೆ ಈ ಹಣ್ಣುಗಳ ಜ್ಯೂಸ್ ಗಳು ಕೂಡ ದೇಹವನ್ನು ಫಿಟ್ ಆಗಿಡುವುದರ ಜೊತೆಗೆ ಯೌವನವನ್ನು ಇಮ್ಮಡಿಗೊಳಿಸುತ್ತವೆ. ದಾಳಿಂಬೆ ಜ್ಯೂಸ್ ಪಾಲಿಫೆನಲ್ಸ್ ನಂತಹ ಅನೇಕ ಎಂಟಿಆಕ್ಸಿಡೆಂಟ್ ಗಳು ಇರುತ್ತವೆ. ಇದು ಉರಿಯೂತ, ಕ್ಯಾನ್ಸರ್ ಮತ್ತು ರಕ್ತದೊತ್ತಡದ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಕ್ಯಾರೆಟ್ ಜ್ಯೂಸ್ ನಲ್ಲಿರುವ ಎಂಟಿಆಕ್ಸಿಡೆಂಟ್ ಅಂಶ,ಲುಟಿನ್ ಕಣ್ಣು ಮತ್ತು ಮೆದುಳಿನ ಕಾರ್ಯಕ್ಕೆ ಬಹಳ ಉಪಯುಕ್ತವಾಗಿದೆ. ಕ್ಯಾರೆಟ್ ನಲ್ಲಿ ಬೀಟಾ ಕ್ಯಾರೊಟೀನ್ ಪೋಷಕಾಂಶ ಇದೆ. ಇದು ಶರೀರದಲ್ಲಿ ವಿಟಮಿನ್ ಎ ಯನ್ನು ಉತ್ಪತ್ತಿ ಮಾಡುತ್ತದೆ.

ಬೀಟ್ ರೂಟ್ ಜ್ಯೂಸ್ ಬೀಟ್ ರೂಟ್ ಯೌವನವನ್ನು ಹೆಚ್ಚಿಸುತ್ತದೆ. ರೆಡಾಕ್ಸ್ ಬಯೊಲಜಿಯ ಒಂದು ಅಧ್ಯಯನದ ಪ್ರಕಾರ ಬೀಟ್ ರೂಟ್ ನಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳು ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಕ್ಯಾರೊಟಿನೈಯ್ಡ್ ಗಳು ಹಣ್ಣುಗಳಿಗೆ ನೈಸರ್ಗಿಕ ಬಣ್ಣವನ್ನು ನೀಡುತ್ತವೆ. ಗುಲಾಬಿ, ದ್ರಾಕ್ಷಿಯಲ್ಲು ಕೂಡ ಲೈಕೊಪೀನ್ ಎಂಬ ಕ್ಯಾರೊಟಿನೈಯ್ಡ್ ಇರುತ್ತದೆ. ಇದು ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

ಗೋಧಿ ಹುಲ್ಲಿನ ಜ್ಯೂಸ್ ರುಚಿಯಲ್ಲದಿದ್ದರೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಎಲ್ಲ ಗಿಡಗಳಿಗೂ ಹಸಿರು ಬಣ್ಣವನ್ನು ನೀಡುವ ಕ್ಲೋರೋಫಿನ್ ಪ್ರಮಾಣ ಗೋಧಿ ಹುಲ್ಲಿನಲ್ಲಿ ಹೇರಳವಾಗಿರುತ್ತದೆ. ವಯೋಸಹಜ ಖಾಯಿಲೆಗಳಿಂದ ದೂರವಿರಬಹುದು.

Edited By : Nirmala Aralikatti
PublicNext

PublicNext

17/02/2022 06:34 pm

Cinque Terre

19.75 K

Cinque Terre

0