ಮೇಷ: ಬಂಧುಗಳ ಆಗಮನ. ಕಚೇರಿಯಲ್ಲಿ ಯಶಸ್ವಿಯಾಗಿ ಜವಾಬ್ದಾರಿ ನಿರ್ವಹಣೆ. ನ್ಯಾಯಾಂಗದವರಿಗೆ ಬಡ್ತಿ ಸಾಧ್ಯತೆ.
ವೃಷಭ: ನಿವೇಶನ ಖರೀದಿ ಸಾಧ್ಯತೆ. ಅನಿರೀಕ್ಷಿತ ಉದ್ಯೋಗ ಬದಲಾವಣೆ. ಕಬ್ಬಿಣ ವ್ಯಾಪಾರಿಗಳಿಗೆ ಅಧಿಕ ಲಾಭವಾಗಲಿದೆ.
ಮಿಥುನ: ಮಾತೃ ಮೂಲವಾದ ಆಸ್ತಿಯಲ್ಲಿ ವಿವಾದ. ಉನ್ನತ ವಿದ್ಯಾಭ್ಯಾಸದ ಕನಸು ಸಾಕಾರ. ಕೃಷಿಕರಿಗೆ ಅಧಿಕ ಲಾಭ.
ಕಟಕ: ಆದಾಯ ಮತ್ತು ನಷ್ಟ ಸಮಾನವಾಗಿರಲಿ. ಸಾರ್ವಜನಿಕ ರಂಗದಲ್ಲಿ ಉತ್ತಮ ಹೆಸರು ಪ್ರಾಪ್ತಿ. ಗಾಯಕರಿಗೆ ವಿಶೇಷ ವೇದಿಕೆ ಲಭ್ಯ.
ಸಿಂಹ: ಉದ್ಯೋಗದ ಒತ್ತಡದಿಂದ ಅನಾರೋಗ್ಯ ಸಾಧ್ಯತೆ. ಪುಸ್ತಕ ವ್ಯಾಪಾರಿಗಳಿಗೆ ನಷ್ಟ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು.
ಕನ್ಯಾ: ಪಿತ್ರಾರ್ಜಿತ ಆಸ್ತಿ ವ್ಯವಹಾರಗಳಲ್ಲಿ ನಿಮ್ಮ ಪರವಾಗಿ ಜಯ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ಅದೃಷ್ಟವಂತರಾಗುವಿರಿ.
ತುಲಾ: ರಾಜಕೀಯದವರಿಗೆ ನಿರಾಸೆ. ಅಭಿವೃದ್ಧಿಯ ಹಂತ ದಲ್ಲಿ ವೈಫಲ್ಯ. ಆತ್ಮೀಯ ಮಿತ್ರರಿಂದ ಅನುಕೂಲ. ದಿನಾಂತ್ಯದಲ್ಲಿ ಆಯಾಸ.
ವೃಶ್ಚಿಕ: ಅನಿರೀಕ್ಷಿತವಾಗಿ ಪ್ರಭಾವಿ ವ್ಯಕ್ತಿಗಳ ಭೇಟಿ. ಯೋಜಿತ ಕೆಲಸಗಳಲ್ಲಿ ಅಪಜಯ. ಮಗಳಿಗೆ ಮದುವೆ ನಿಶ್ಚಯವಾಗಲಿದೆ.
ಧನುಸ್ಸು: ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ. ಪಾಲುದಾರರಿಂದ ವಿಶ್ವಾಸದ್ರೋಹ. ಮಾನಸಿಕ ಕಿರಿಕಿರಿ. ವೈದ್ಯರ ಸಲಹೆ ಪಾಲಿಸಿ.
ಮಕರ: ಸಾರ್ವಜನಿಕವಾಗಿ ಸಹನೆಯಿಂದ ವರ್ತಿಸಿ. ವೃತ್ತಿನಿರತ ವೈದ್ಯರಿಗೆ ಸನ್ಮಾನ. ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಅವಮಾನ.
ಕುಂಭ: ಮಗನ ವಿವಾಹದಲ್ಲಿ ಗೊಂದಲ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಧಾರ್ವಿುಕ ವ್ಯಕ್ತಿಗಳ ಭೇಟಿ. ತೀರ್ಥಯಾತ್ರೆ ಸಾಧ್ಯತೆ.
ಮೀನ: ಅನ್ಯರ ಭಾವನೆ ಗೌರವಿಸಿ. ಉದ್ಯೋಗ ಕ್ಷೇತ್ರದಲ್ಲಿ ಕಿರುಕುಳ. ಜಟಿಲ ಸಮಸ್ಯೆಯನ್ನು ಜಾಣ್ಮೆಯಿಂದ ಬಗೆಹರಿಸುವಿರಿ.
PublicNext
05/02/2022 07:11 am