ಬೇಕಾಗುವ ಸಾಮಾಗ್ರಿಗಳು: ಮೈದಾ ಹಿಟ್ಟು 170 ಗ್ರಾಂ, ಎಣ್ಣೆ 1 ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು.
ಹೂರಣಕ್ಕೆ ಬೇಕಾಗುವ ಸಾಮಾಗ್ರಿಗಳು: ಸಣ್ಣಗೆ ಹೆಚ್ಚಿದ ಈರುಳ್ಳಿ ಅರ್ಧ ಕಪ್, ಚಿಕ್ಕದಾಗಿ ಹೆಚ್ಚಿ ಬೇಯಿಸಿದ ಆಲೂಗಡ್ಡೆ ಅರ್ಧ ಕಪ್, ಬೇಯಿಸಿದ ಬಟಾಣಿ, ಬೇಯಿಸಿದ ನೂಡಲ್ಸ್ 1 ಬಟ್ಟಲು, ಕೊತ್ತಂಬರಿ ಸೊಪ್ಪು ಸ್ವಲ್ಪ, ಗರಂ ಮಸಾಲ ಅರ್ಧ ಚಮಚ, ಸೋಯಾ ಸಾಸ್ ಒಂದೂವರೆ ಚಮಚ, ತುಪ್ಪ 2 ಚಮಚ, ಕರಿಯಲು ಬೇಕಾಗುವಷ್ಟು ಎಣ್ಣೆ.
ಮಾಡುವ ವಿಧಾನ : ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ. ಹೆಚ್ಚಿದ ಈರುಳ್ಳಿ, ಆಲೂಗಡ್ಡೆ, ಬಟಾಣಿ ಬೇಯಿಸಿದ ನೂಡಲ್ಸ್, ಗರಂ ಮಸಾಲ, ಸೋಯಾ ಸಾಸ್ ಮತ್ತು ಉಪ್ಪು ಹಾಕಿ ಕೈಯಾಡಿಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಹೂರಣ ರೆಡಿ ಮಾಡಿ ತಣ್ಣಗಾಗಲು ಬಿಡಿ. ಮೈದಾಹಿಟ್ಟಿಗೆ ಉಪ್ಪು ಮತ್ತು ತುಪ್ಪ ಹಾಕಿ ಬೆಚ್ಚಗಿನ ನೀರಿನಿಂದ ಚೆನ್ನಾಗಿ ಕಲೆಸಿ ಉಂಡೆಗಳನ್ನಾಗಿ ಮಾಡಿ ತೆಳ್ಳಗೆ ಲಟ್ಟಿಸಿ. ಹೂರಣವನ್ನು ತುಂಬಿ ಸಮೋಸದ ಆಕಾರಕ್ಕೆ ಕತ್ತರಿಸಿ ಕಾದ ಎಣ್ಣೆಯಲ್ಲಿ ಹಾಕಿ ನಿಧಾನವಾಗಿ ಗರಿ ಗರಿಯಾಗಿ ಕರಿಯಬೇಕು. ಸ್ವಲ್ಪ ಹೊತ್ತಲ್ಲೇ ನೂಡಲ್ಸ್ ಸಮೋಸ ಸವಿಯಲು ಸಿದ್ಧ.
PublicNext
22/11/2021 02:58 pm