ವಿಧ ವಿಧವಾದ ತಿನಿಸುಗಳಲ್ಲಿ ಸೋಯಾ ಸ್ಯಾಂಡವಿಚ್ ಕೂಡ ಒಂದು. ಸ್ಯಾಂಡವಿಚ್ ಗಳನ್ನು ತುಂಬಾ ರೀತಿಯಲ್ಲಿ ತಯಾರಿಸಬಹುದು. ಇಂತಹುದೇ ಒಂದು ಪ್ರೋಟಿನ್ ಭರಿತವಾದ ಸ್ಯಾಂಡವಿಚ್ ಎಂದರೆ ಅದೇ ಸೋಯಾ ಸ್ಯಾಂಡವಿಚ್. ಸೋಯಾ ಚಂಕ್ಸನ್ನು ನೀರಿನಲ್ಲಿ ನೆನೆಸಿ, ರುಬ್ಬಿ ಅದಕ್ಕೆ ಮಸಾಲೆಯನ್ನು ಸೇರಿಸಿ ಪಲ್ಯ ಮಾಡಿಕೊಂಡು, ಬ್ರೆಡ್ ಒಳಗಡೆ ಇಟ್ಟು ಮಾಡುವುದೇ ಸೋಯಾ ಸ್ಯಾಂಡವಿಚ್. ಇದು ಎಲ್ಲಾ ವಯಸ್ಸಿನವರಿಗೂ ತುಂಬಾ ಇಷ್ಟವಾಗುತ್ತದೆ. ಅಷ್ಟೇ ಅಲ್ಲದೆ ಆರೋಗ್ಯಕ್ಕೂ ತುಂಬಾ ಒಳ್ಳೆಯ ಆಹಾರ. ರುಚಿಯಾದ ಸೋಯಾ ಸ್ಯಾಂಡವಿಚ್ ಮಾಡುವುದು ಕೂಡ ತುಂಬಾ ಸುಲಭ. ಬನ್ನಿ ಹಾಗಾದರೆ ಮಾಡುವ ವಿಧಾನವನ್ನು ನೋಡೋಣ.
PublicNext
17/11/2021 04:12 pm