ಬೆಲ್ಲ ಇಲ್ಲದೆಯೇ ಖರ್ಜೂರದಿಂದ ರುಚಿಕರವಾದ ಹೋಳಿಗೆ ಮಾಡಬಹುದು.
ಬೇಕಾಗುವ ಸಾಮಗ್ರಿ:
1 ಕಪ್ ಖರ್ಜೂರ, ¼ಕಪ್- ನೀರು, ಮೈದಾ ಹಿಟ್ಟು ¾ ಕಪ್, ಚಿರೋಟಿ ರವೆ-2 ಟೇಬಲ್ ಸ್ಪೂನ್, ¼ ಕಪ್-ನೀರು, ಎಣ್ಣೆ-2 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಒಂದು ದೊಡ್ಡ ಬೌಲ್ ಗೆ ಮೈದಾ ಹಿಟ್ಟು, ಚಿರೋಟಿ ರವೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ½ ಟೇಬಲ್ ಸ್ಪೂನ್ ಎಣ್ಣೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದಕ್ಕೆ ಎಷ್ಟು ಬೇಕೋ ಅಷ್ಟು ನೀರು ಸೇರಿಸುತ್ತಾ ಕಲಸಿಕೊಳ್ಳಿ. ಹೋಳಿಗೆ ಹಿಟ್ಟಿನ ಹದಕ್ಕೆ ಬರಲಿ. ನಂತರ 1 ಟೇಬಲ್ ಸ್ಪೂನ್ ಎಣ್ಣೆ ಈ ಹಿಟ್ಟಿನ ಮೇಲೆ ಹಾಕಿ ಸ್ವಲ್ಪ ನಾದಿ 3 ಗಂಟೆಗಳ ಕಾಲ ಹಾಗೇ ಮುಚ್ಚಿಡಿ.
ನಂತರ ಕುಕ್ಕರ್ ತಳಕ್ಕೆ ನೀರು ಹಾಕಿ ಅದರ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಖರ್ಜೂರವನ್ನು ಹಾಕಿ ಆವಿಯಲ್ಲಿ ಬೇಯಿಸಿಕೊಳ್ಳಿ. 1 ವಿಷಲ್ ಬರಿಸಿಕೊಂಡರೆ ಸಾಕು.
ನಂತರ ಖರ್ಜೂರದ ಬೀಜ ತೆಗೆದು ಒಂದು ಮಿಕ್ಸಿ ಜಾರಿನಲ್ಲಿ ಖರ್ಜೂರ ಹಾಕಿ ಸಣ್ಣಕ್ಕೆ ರುಬ್ಬಿಕೊಳ್ಳಿ. ಇದು ಹೂರಣದ ಹದಕ್ಕೆ ಬಂದರೆ ಸಾಕು. ನಂತರ ಮೈದಾ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ನಂತರ ಈ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಲಟ್ಟಿಸಿಕೊಳ್ಳಿ. ಇದರ ಮಧ್ಯೆ ಖರ್ಜೂರದ ಹೂರಣವಿಟ್ಟು ಮತ್ತೊಮ್ಮೆ ಲಟ್ಟಿಸಿ ಬೇಯಿಸಿದರೆ ಹೋಳಿಗೆ ರೆಡಿ.
PublicNext
08/11/2021 07:46 pm