ಇಂದಿನ ದಿನಗಳಲ್ಲಿ ಎಲ್ಲರೂ ಆಫೀಸ್ ಕೆಲಸ ಮಾಡುವವರೇ ಹೆಚ್ಚಾಗಿದ್ದಾರೆ. ಮನೆಯವರು ಕೆಲಸಕ್ಕೆ ಹೋಗಬೇಕು, ಮಕ್ಕಳು ಶಾಲೆಗೆ ಹೋಗಬೇಕು. ಇಂತಹ ಸಂದರ್ಭಗಳಲ್ಲಿ ಬೆಳಗಿನ ಉಪಹಾರಕ್ಕೆ ಮತ್ತು ಮಧ್ಯಾಹ್ನದ ಡಬ್ಬಿಗೆ ಏನೇನೆಲ್ಲಾ ಮಾಡಬೇಕು ಎಂಬುದೇ ಪ್ರತಿದಿನದ ಚಿಂತೆ. ಅಂತಹ ಸಂದರ್ಭಗಳಲ್ಲಿ ನಾವು ಗಡಿಬಿಡಿಯಲ್ಲಿ ಸೋರೆಕಾಯಿ ರೊಟ್ಟಿಯನ್ನು ತಟ್ಟಿಕೊಳ್ಳಬಹುದು. ತುಂಬಾ ರುಚಿಯಾಗಿ ಮತ್ತು ಆರೋಗ್ಯಕರವಾಗಿರುತ್ತದೆ. ಇದರಲ್ಲಿ ನಾವು ಸೋರೆಕಾಯಿ ಬದಲಾಗಿ ಗಜ್ಜರಿ ಅಥವಾ ಸೌತೆಕಾಯಿಯನ್ನು ಸಹ ಬಳಸಬಹುದು.
PublicNext
25/10/2021 06:25 pm