ಜೀರಾ ರೈಸ್ ಮತ್ತು ದೊಡ್ಡ ಮೆಣಸಿನಕಾಯಿ ಕರಿ ಒಂದು ಒಳ್ಳೆಯ ರುಚಿಕರವಾದ ಅಡುಗೆ. ದಿನವೂ ಅದೇ ಸಾದಾ ಅನ್ನ ಸಾರು ತಿನ್ನುವುದು ಬೇಡ ಎನಿಸಿದಾಗ ಇದನ್ನು ಮಾಡಿಕೊಳ್ಳಬಹುದು. ಮನೆಗೆ ಯಾರಾದರೂ ಅನಿರೀಕ್ಷಿತವಾಗಿ ನೆಂಟರು ಬಂದಾಗ ಇದನ್ನು ಬೇಗನೆ ಮಾಡಬಹುದು. ಈ ಜೀರಾ ರೈಸ್‌ನಲ್ಲಿರುವ ಜೀರಿಗೆ, ಚಕ್ಕೆ, ಲವಂಗ, ಪಲಾವ್ ಎಲೆಯ ಘಮ ಮನೆಯ ತುಂಬೆಲ್ಲಾ ಆವರಿಸುತ್ತದೆ. ಈ ಜೀರಾ ರೈಸ್ ನ ರುಚಿ ಇನ್ನೂ ಎರಡು ತುತ್ತು ಹೆಚ್ಚಿಗೆ ಊಟಮಾಡುವಂತೆ ಪ್ರೇರೇಪಿಸುತ್ತದೆ. ಇದರ ಜೊತೆಗೆ ದೊಡ್ಡ ಮೆಣಸಿನಕಾಯಿ ಕರಿ ಹಾಕಿಕೊಂಡು ತಿಂದರೆ ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ. ಬನ್ನಿ ಜೀರಿಗೆ ಅನ್ನದ ಜೊತೆ ಕ್ಯಾಪ್ಸಿಕಂ ಕರಿ ಮಾಡುವ ವಿಧಾನವನ್ನು ನೋಡೋಣ.
PublicNext
21/10/2021 11:53 am