ಬೆಳಗಿನ ಉಪಹಾರಕ್ಕೆ ವಿಧ ವಿಧವಾದ ತಿಂಡಿಗಳೇ ಬೇಕು. ಮಹಿಳೆಯರಿಗೆ ದಿನವೂ ಇದೇ ಚಿಂತೆ, ನಾಳೆ ಉಪಹಾರಕ್ಕೆ ಏನು ಮಾಡುವುದು ಎಂದು. ದೋಸೆ ಇಡ್ಲಿಗಳಿಗೆ ಅಕ್ಕಿ ಹಾಕಲು ಮರೆತಾಗ ಏನಾದರೂ ವಿಭಿನ್ನವಾದ ತಿಂಡಿ ಮಾಡಬೇಕೆನಿಸಿದಾಗ ನಾವು ಅಕ್ಕಿ ರೊಟ್ಟಿ ಮತ್ತು ಕಾಯಿ ಚಟ್ನಿ ಮಾಡಬಹುದು. ಅಕ್ಕಿ ರೊಟ್ಟಿ ಮತ್ತು ಕಾಯಿ ಚಟ್ನಿ ಇದರ ಸಂಯೋಜನೆಯೇ ಒಂದು ಅದ್ಭುತ ರುಚಿ ನೀಡುತ್ತದೆ. ಇದು ಉಪಹಾರಕ್ಕೂ ಸೈ ಹಾಗೇ ಊಟಕ್ಕೂ ಸರಿ ಹೊಂದುವಂತಹ ಅಡುಗೆ. ಸಾಮಾನ್ಯವಾದ ಅಕ್ಕಿ ರೊಟ್ಟಿಯನ್ನು ಕೇವಲ ಅಕ್ಕಿ ಹಿಟ್ಟಿನಿಂದ ಮಾಡುತ್ತಾರೆ. ರುಚಿಯಾದ ಅಕ್ಕಿ ರೊಟ್ಟಿ ಕಾಯಿ ಚಟ್ನಿ ಮಾಡುವ ರೀತಿಯನ್ನು ನೋಡೋಣ.
PublicNext
19/10/2021 04:03 pm