ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆಯಲ್ಲಿಯೇ ಮಾಡಿ ‘ಗಾರ್ಲಿಕ್ ನಾನ್ʼ

ಮನೆಯಲ್ಲಿ ಒಮ್ಮೆ ಗಾರ್ಲಿಕ್ ನಾನ್ ಮಾಡಿಕೊಂಡು ಸವಿಯಿರಿ.

ಒಂದು ಬೌಲ್ ಗೆ 2 ಕಪ್ ಮೈದಾ ಹಿಟ್ಟು ಹಾಕಿಕೊಂದು ಅದಕ್ಕೆ ¼ ಕಪ್ ಮೊಸರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ನಾದಿಕೊಳ್ಳಿ. ನಂತರ ಈ ಮುದ್ದೆಗೆ ಎಣ್ಣೆ ಸವರಿ ಎರಡು ಗಂಟೆಗಳ ಕಾಲ ಹಾಗೇ ಇಡಿ. ಬಳಿಕ 3 ಟೇಬಲ್ ಸ್ಪೂನ್ ತುಪ್ಪಕ್ಕೆ 1 ಟೀ ಸ್ಪೂನ್ ಬೆಳ್ಳುಳ್ಳಿ ಪೇಸ್ಟ್, 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಮೈದಾ ಹಿಟ್ಟಿನ ಮಿಶ್ರಣದಿಂದ ಸ್ವಲ್ಪ ಸಣ್ಣ ಸೈಜಿನ ಉಂಡೆ ಮಾಡಿಕೊಂಡು ಚಪಾತಿ ರೀತಿ ಲಟ್ಟಿಸಿಕೊಳ್ಳಿ. ಲಟ್ಟಿಸಿಕೊಂಡ ನಾನ್ ಮೇಲೆ ಒಂದು ಬ್ರಷ್ ನ ಸಹಾಯದಿಂದ ನೀರನ್ನು ಎಣ್ಣೆ ರೀತಿ ಹಚ್ಚಿಕೊಳ್ಳಿ. ನಂತರ ಒಂದು ಕಬ್ಬಿಣದ ತವಾವನ್ನು ಗ್ಯಾಸ್ ಮೇಲೆ ಇಟ್ಟು ಮಾಡಿಟ್ಟುಕೊಂಡ ನಾನ್ ಅನ್ನು ತವಾದ ಮೇಲೆ ಹಾಕಿ.

ನೀರು ಹಚ್ಚಿಕೊಂಡ ಭಾಗ ತವಾದ ಅಡಿಗೆ ಹಾಕಿಕೊಳ್ಳಿ. ನಿಧಾನಕ್ಕೆ ನಾನ್ ಅನ್ನು ಕೈಯಿಂದ ಒತ್ತಿ. ನಂತರ ತವಾವನ್ನು ಗ್ಯಾಸ್ ಬೆಂಕಿಗೆ ಹಿಡಿಯಿರಿ. ಚೆನ್ನಾಗಿ ನಾನ್ ಎಲ್ಲಾ ಕಡೆ ಬೇಯಲಿ. ನಂತರ ಇದರ ಮೇಲೆ ಮಾಡಿಟ್ಟುಕೊಂಡ ತುಪ್ಪ ಹಾಗೂ ಬೆಳ್ಳುಳ್ಳಿ ಮಿಶ್ರಣವನ್ನು ಹಚ್ಚಿ ನಿಧಾನಕ್ಕೆ ನಾನ್ ಅನ್ನು ತವಾದಿಂದ ತೆಗೆಯಿರಿ.

Edited By : Nirmala Aralikatti
PublicNext

PublicNext

01/10/2021 02:45 pm

Cinque Terre

17.09 K

Cinque Terre

0