ಮೀನಿನ ಖಾದ್ಯಗಳು ಅನೇಕರಿಗೆ ಅಚ್ಚುಮೆಚ್ಚು. ಸುಲಭವಾಗಿ ಮಾಡಬಹುದಾದ ಗೋವಾ ಫಿಶ್ ಕರಿಯ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥ:
1 ಮಧ್ಯಮ ಗಾತ್ರದ ಪಾಂಫ್ರೆಟ್, 1 ದೊಡ್ಡ ಈರುಳ್ಳಿ ಹೆಚ್ಚಿದ್ದು, 1 ತೆಂಗಿನ ಕಾಯಿ ಗಟ್ಟಿ ಹಾಲು, ಅರ್ಧ ಕಪ್ ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು.
ರುಬ್ಬಿಕೊಳ್ಳಲು ಬೇಕಾದ ಸಾಮಗ್ರಿ:
¼ ತೆಂಗಿನ ಕಾಯಿ, ½ ಸ್ಪೂನ್ ಕರಿಮೆಣಸು, 1 ಟೀ ಸ್ಪೂನ್ ಧನಿಯಾ, 1 ಟೀ ಸ್ಪೂನ್ ಜೀರಿಗೆ, ಬೀಜ ತೆಗೆದ 10 ಕೆಂಪು ಮೆಣಸಿನ ಕಾಯಿ, 2 ಬೆಳ್ಳುಳ್ಳಿ.
ತಯಾರಿಸುವ ವಿಧಾನ:
ಪಾತ್ರೆಯೊಂದರಲ್ಲಿ ರುಬ್ಬಿದ ಮಸಾಲೆ, ಈರುಳ್ಳಿ, ಉಪ್ಪು ಹಾಕಿರಿ. 2 ಕಪ್ ನೀರನ್ನು ಹಾಕಿ ಸಣ್ಣ ಉರಿಯಲ್ಲಿ ಈರುಳ್ಳಿ ಬೇಯುವ ತನಕ ಬೇಯಿಸಿ.
ಅದಕ್ಕೆ ತೆಂಗಿನ ಹಾಲು ಹಾಕಿ ಉರಿ ಜಾಸ್ತಿ ಮಾಡಿ ಕುದಿಸಿರಿ. ಬಳಿಕ ಉರಿ ಕಡಿಮೆ ಮಾಡಿಕೊಳ್ಳಿ. ಹುಣಸೆ ಹಣ್ಣಿನ ರಸವನ್ನು ಹಾಕಿ ಮತ್ತೆ 5 ನಿಮಿಷ ಬೇಯಿಸಿ.
ಕೊನೆಗೆ ಕ್ಲೀನ್ ಮಾಡಿಟ್ಟುಕೊಂಡ ಮೀನು ಹಾಕಿ ಬೇಯಿಸಿ, ಬೆಂದ ಬಳಿಕ ಕೆಳಗಿಳಿಸಿ ರುಚಿಯನ್ನು ಸವಿಯಿರಿ.
PublicNext
26/09/2021 02:50 pm