ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಜ್ಜಾಯ ಅಥವಾ ಅತಿರಸ ಮಾಡುವ ವಿಧಾನ

ಹಬ್ಬಗಳು ಬರುತ್ತಿದ್ದಂತೆ, ಸಿಹಿ ಅಡುಗೆಗಳ ಸುರಿಮಳೆ. ಮಹಿಳೆಯರೆಲ್ಲ ತಿನಿಸುಗಳನ್ನು ಮಾಡುವುದರಲ್ಲಿ ತಲ್ಲೀನರಾದರೆ, ಮಕ್ಕಳೆಲ್ಲ ಅವುಗಳ ಸವಿಯನ್ನು ಸವಿಯುವುದರಲ್ಲಿ ನಿರತರಾಗಿರುತ್ತಾರೆ. ಸಾಮಾನ್ಯವಾಗಿ ಒಂದೊಂದು ಪ್ರದೇಶಗಳಲ್ಲಿ ಮಾಡುವ ಸಿಹಿ ಅಡುಗೆಗಳು ವಿಭಿನ್ನವಾಗಿರುತ್ತವೆ. ಉತ್ತರ ಕರ್ನಾಟಕದಲ್ಲಿ ಕರ್ಜಿಕಾಯಿ, ಸುರಳಿ ಹೋಳಿಗೆ, ಬೂಂದಿ ಲಾಡು, ಹೂರಣ ಹೋಳಿಗೆ, ಹೂರಣ ಕಡುಬು ಇತ್ಯಾದಿಗಳು ಪ್ರಸಿದ್ಧವಾದರೆ, ಕರಾವಳಿ ಪ್ರದೇಶಗಳಲ್ಲಿ ಅಕ್ಕಿ ಕಡುಬು, ಕಜ್ಜಾಯ, ಬಾಳೆ ಎಲೆ ಕಡುಬು ಇತ್ಯಾದಿಗಳು ಪ್ರಸಿದ್ಧವಾಗಿವೆ. ಕಜ್ಜಾಯವನ್ನು ಬೇರೆ ಬೇರೆ ವಿಧಗಳಲ್ಲಿ, ಬೇರೆ ಬೇರೆ ಪದಾರ್ಥಗಳನ್ನು ಹಾಕಿ ಮಾಡುತ್ತಾರೆ.

ಇಂದು ನಾವು ಮಾಡುತ್ತಿರುವ ಕಜ್ಜಾಯ ತುಂಬಾ ಮೃದುವಾಗಿದ್ದು, ತಿನ್ನುವವರ ಬಾಯಲ್ಲಿ ನೀರೂರಿಸುತ್ತದೆ. ಇದೊಂದು ಸಾಂಪ್ರದಾಯಿಕ ಅಡುಗೆ. ಮಾಡುವುದರಲ್ಲಿ ತುಂಬಾ ಜಾಗ್ರತೆ ಬೇಕು. ಉಪಯೋಗಿಸುವ ಸಾಮಗ್ರಿಗಳ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾದರೂ ರುಚಿ ಕೆಟ್ಟು ಹೋಗುವುದರ ಜೊತೆಗೆ ಕಜ್ಜಾಯ ಮಾಡಲು ಬರುವುದೇ ಇಲ್ಲ. ಮಾಡಿದ ಶ್ರಮವೆಲ್ಲ ವ್ಯರ್ಥವಾಗುತ್ತದೆ.

Edited By : Vijay Kumar
PublicNext

PublicNext

25/09/2021 09:57 pm

Cinque Terre

59.47 K

Cinque Terre

0