ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೂಕ ಕಡಿಮೆ ಮಾಡಲು ಸಿಂಪಲ್ ‘ಟಿಪ್ಸ್’

ತೂಕ ನಷ್ಟಕ್ಕೆ ಈ ಬೆಲ್ಲ ಮತ್ತು ನಿಂಬೆ ಬೆರೆಸಿದ ನೀರನ್ನು ಪ್ರಯತ್ನಿಸಿ. ನಿಂಬೆ ವಿಟಮಿನ್ ಸಿ ಯ ಒಂದು ಮೂಲವಾಗಿದೆ. ಈ ಅಂಶವು ಹೈಡ್ರೇಶನ್, ಚರ್ಮದ ಗುಣಮಟ್ಟ, ಜೀರ್ಣಕ್ರಿಯೆ, ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಹಾಗೂ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಮುಖ್ಯವಾಗಿ ಇದು ತೂಕ ನಷ್ಟ ಮತ್ತು ನಿರ್ವಹಣೆಗೆ ಸಹಾಯ ಮಾಡುತ್ತದೆ. ಸಿಹಿತಿಂಡಿಗಳನ್ನು ತಯಾರಿಸಲು ಸಾಮಾನ್ಯವಾಗಿ ಬಳಸುವ ಬೆಲ್ಲ ಕೂಡ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಬೆಲ್ಲವು ಜೀರ್ಣಕ್ರಿಯೆಯ ಸುಧಾರಣೆ, ದೇಹದ ಶುದ್ಧೀಕರಣಕ್ಕೆ, ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಆದುದರಿಂದ ತೂಕ ನಷ್ಟಕ್ಕೆ ಬೆಲ್ಲ ಮತ್ತು ನಿಂಬೆ ನೀರನ್ನು ಪ್ರಯತ್ನಿಸುವುದು ಅತ್ಯಗತ್ಯ.

ಮೊದಲು ಒಂದು ಸಣ್ಣ ತುಂಡು ಬೆಲ್ಲವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಅದನ್ನು ತಣ್ಣಗಾಗಲು ಬಿಡಿ. ಈಗ ಬೆಲ್ಲದ ನೀರಿಗೆ ಒಂದು ಚಮಚ ನಿಂಬೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ನೀವು ಪ್ರತಿದಿನ ಬೆಳಿಗ್ಗೆ ಈ ಪಾನೀಯವನ್ನು ಸೇವಿಸಬಹುದು. ಇದು ನಿಮ್ಮ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.

Edited By : Nirmala Aralikatti
PublicNext

PublicNext

22/09/2021 11:56 am

Cinque Terre

20.38 K

Cinque Terre

0