ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಖದ ಕಾಂತಿಗಾಗಿ ಈ ಎರಡು ಅಕ್ಷರಗಳನ್ನು ಉಚ್ಚರಿಸಿ

40ರ ಮೇಲೂ ಮುಖದಲ್ಲಿ ಕಾಂತಿ ಉಳಿಯಬೇಕೇ?ಹಾಗಾದ್ರೆ ಪ್ರತಿದಿನ ಈ ಎರಡು ಅಕ್ಷರಗಳನ್ನು ಉಚ್ಛರಿಸಿ… ವಯಸ್ಸಾಗುವುದನ್ನು ನಿಲ್ಲಿಸಲು ಸಾಧ್ಯವಿಲ್ಲ, ಆದರೆ ಮುಖದ ಮೇಲೆ ವಯಸ್ಸಾಗುವಿಕೆಯ ಪರಿಣಾಮವನ್ನು ಕಡಿಮೆ ಮಾಡಲು ಕೆಲವು ತಂತ್ರಗಳನ್ನು ಮಾಡಬಹುದು. ದೇಹವನ್ನು ಫಿಟ್ ಆಗಿಡಲು ವ್ಯಾಯಾಮ ಮಾಡುವುದು ಹೇಗೆ ಅಗತ್ಯವೋ, ಅದೇ ರೀತಿ ಮುಖದ ಮೇಲೆ ಊತ ಮತ್ತು ಸುಕ್ಕುಗಳನ್ನು ತಪ್ಪಿಸಲು ಮುಖದ ವ್ಯಾಯಾಮಗಳನ್ನು ಮಾಡುವುದು ಅಷ್ಟೇ ಅವಶ್ಯಕ.

ವಯಸ್ಸಾದ ಮೇಲೂ ತಾರುಣ್ಯಪೂರ್ಣ ತ್ವಚೆ ಪಡೆಯಲು ಮಾಡಬೇಕಾದ ಅತ್ಯಂತ ಸುಲಭವಾದ ವ್ಯಾಯಾಮ ಅಥವಾ ಮುಖದ ಯೋಗ ಇದೆ ನೋಡಿ..ಆ ಎರಡು ಅಕ್ಷರಗಳೆಂದರೆ 'ಒ' ಮತ್ತು 'ಇ'. ಈ ಎರಡು ಅಕ್ಷರಗಳನ್ನು ಪದೇ ಪದೇ ಉಚ್ಛಾರ ಮಾಡುವ ಮೂಲಕ ಸುಕ್ಕು ಹಾಗೂ ಡಬಲ್ ಗಲ್ಲದ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ನಿರಂತರವಾಗಿ 5 ನಿಮಿಷಗಳ ಕಾಲ 'ಇ' ಮತ್ತು'ಒ' ಅಕ್ಷರಗಳಿಗೆ ಸ್ವಲ್ಪ ಒತ್ತು ಕೊಟ್ಟು, ವ್ಯಾಯಾಮ ಮಾಡಿದರೆ, ಕಾಲಕ್ರಮೇಣ ಫಲಿತಾಂಶವನ್ನು ಕಾಣಬಹುದು.

Edited By : Nirmala Aralikatti
PublicNext

PublicNext

21/09/2021 05:14 pm

Cinque Terre

23.31 K

Cinque Terre

0