ಸಂಜೆ ಟೈಮ್‌ನಲ್ಲಿ ಟೀ ಅಥವಾ ಕಾಫಿ ಜೊತೆ ಏನಾದರು ಕರಿದ ತಿಂಡಿಗಳಿದ್ದರೆ, ಆಹಾ… ಕೇಳಿದರೇ ಬಾಯಲ್ಲಿ ನೀರೂರುತ್ತದೆ. ಸಾಮಾನ್ಯವಾಗಿ ಸಂಜೆ ತಿಂಡಿ ಅಂದಾಕ್ಷಣ ಮನಸ್ಸಿಗೆ ಬರೋದು ಬಜ್ಜಿ, ಬೋಂಡಾ, ಮ್ಯಾಗಿ ಇತ್ಯಾದಿ. ಇನ್ನು ಮಳೆಗಾಲದಲ್ಲಂತೂ ಅದರ ರುಚಿ ಇನ್ನಷ್ಟು ಹೆಚ್ಚು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ನೆಚ್ಚಿನ ತಿಂಡಿಯಿದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಈರುಳ್ಳಿ ಪಕೋಡ ಮಾಡಿರುತ್ತೇವೆ. ಆದರೆ ಈ ಸಲ ಸ್ವಲ್ಪ ವಿಭಿನ್ನ ಶೈಲಿಯಲ್ಲಿ ಈರುಳ್ಳಿ ಪಕೋಡ ಮಾಡುವ ವಿಧಾನವನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಅದೇನೆಂದರೆ ಮ್ಯಾಗಿಯನ್ನು ಬಳಸಿ ಮಾಡುವ ಈರುಳ್ಳಿ ಪಕೋಡ. ಇದನ್ನು ನೀವು ಕೇವಲ 10 ನಿಮಿಷದಲ್ಲಿ ತಯಾರಿಸಬಹುದು ಹಾಗೂ ಈ ಪಕೋಡ ತಯಾರಿಸಲು ಬೇಕಾಗುವ ಸಾಮಾಗ್ರಿಗಳು ಕೆಲವೇ ಕೆಲವು !
PublicNext
20/09/2021 06:34 pm