ಹೇರ್ ಸ್ಪಾ ಮಾಡುವುದರಿಂದ ಕೂದಲಿನ ಸೌಂದರ್ಯ ಹೆಚ್ಚುವುದು.
ಎಣ್ಣೆ ಹಚ್ಚುವುದು
ಕೂದಲನ್ನು ಹೈಡ್ರೇಟ್ ಮಾಡಲು, ಮೃದುವಾಗಿಸಲು ಎಣ್ಣೆ ಹಾಕಬೇಕು. ತಲೆಗೆ ಎಣ್ಣೆ ಹಚ್ಚುವುದರಿಂದ ತಲೆ ಹೊಟ್ಟು, ಹೇನು ಇವುಗಳನ್ನು ತಡೆಗಟ್ಟಬಹುದು. ಕೂದಲಿನ ಬುಡ ಬಲವಾಗಿರುತ್ತೆ. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಿದರೆ ತುಂಬ ಒಳ್ಳೆಯದು. ತಲೆಗೆ ಎಣ್ಣೆ ಹಚ್ಚಿ 20 ನಿಮಿಷ ಮಸಾಜ್ ಮಾಡಿ. ನೀವು ಎಣ್ಣೆ ಜೊತೆಗೆ ನೆಲ್ಲಿಕಾಯಿ, ಬೃಂಗ ರಾಜ ಮುಂತಾದವುಗಳನ್ನು ಸೇರಿಸಿದರೆ ಮತ್ತಷ್ಟು ಒಳ್ಳೆಯದು.
ಸ್ಟೀಮಿಂಗ್
ಕೂದಲಿಗೆ ಎಣ್ಣೆ ಹಚ್ಚಿದ ಬಳಿಕ ಸ್ಟೀಮಿಂಗ್ ಮಾಡಬೇಕು. ಕನಿಷ್ಠ 15 ನಿಮಿಷ ಸ್ಟೀಮಿಂಗ್ ಮಾಡಿ. ಸ್ಟೀಮಿಂಗ್ ಮಾಡುವುದರಿಂದ ಕೂದಲಿನ ಬುಡದ ರಂಧ್ರಗಳು ಓಪನ್ ಆಗುತ್ತವೆ, ಹೀಗಾಗಿ ಎಣ್ಣೆಯಲ್ಲಿರುವ ಖನಿಜಾಂಶಗಳು, ವಿಟಮಿನ್ ಗಳನ್ನು ಕೂದಲಿನ ಬುಡ ಚೆನ್ನಾಗಿ ಹೀರಿಕೊಳ್ಳುತ್ತದೆ. ಕೂದಲಿನ ಬುಡದಲ್ಲಿ ರಕ್ತ ಸಂಚಾರ ಚೆನ್ನಾಗಿರುತ್ತದೆ.
ನಿಮಗೆ ಸ್ಟೀಮಿಂಗ್ ಮಾಡುವ ಸಾಧನವಿಲ್ಲದಿದ್ದರೆ ಒಂದು ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ಹಿಂಡಿ ಅದನ್ನು ತಲೆಗೆ ಸುತ್ತಿದರೂ ಸಾಕು.
ಕೂದಲನ್ನು ತೊಳೆಯಿರಿ
ಅಕ್ಕಿ ತೊಳೆದ ನೀರಿನಿಂದ ಕೂದಲನ್ನು ತೊಳೆಯಿರಿ. ಇದಕ್ಕೆ ಬೇಕಿದ್ದರೆ ಸ್ವಲ್ಪ ಆ್ಯಪಲ್ ಸಿಡರ್ ವಿನೆಗರ್ ಹಾಕಿದರೂ ಇನ್ನೂ ಒಳ್ಳೆಯದು.
ಹೇರ್ ಮಾಸ್ಕ್ ಹಾಕಿ
ಈಗ ಕೂದಲಿನ ಬುಡದಿಂದ ತುದಿಯವರೆಗೆ ಹೇರ್ ಮಾಸ್ಕ್ ಹಾಕಿ. ಇದಕ್ಕೆ ನೀವು ನೈಸರ್ಗಿಕವಾದ ವಸ್ತುಗಳನ್ನೇ ಬಳಸಿ. ಮೆಹಂದಿ ಹಾಕಬಹುದು, ಮೆಂತೆ ಕಾಳನ್ನು ನೆನೆಹಾಕಿ ಅರಿದು ಪೇಸ್ಟ್ ಮಾಡಿ ಹಚ್ಚಬಹುದು, ಬಾಳೆ ಹಣ್ಣಿನ ಹೇರ್ ಮಾಸ್ಕ್, ಮೊಟ್ಟೆ ಮಾಸ್ಕ್ ಹೀಗೆ ನಿಮಗೆ ಯಾವುದು ಸೂಕ್ತ ಅನಿಸುವುದೋ ಆ ಹೇರ್ ಮಾಸ್ಕ್ ಹಚ್ಚಿ 15 ನಿಮಿಷ ಬಿಡಿ.
ಮೈಲ್ಡ್ ಶ್ಯಾಂಪೂ ಹಚ್ಚಿ ತೊಳೆಯಿರಿ
ಕೊನೆಯದಾಗಿ ಕೂದಲಿಗೆ ಮೈಲ್ಡ್ ಶ್ಯಾಂಪೂ ಹಚ್ಚಿ ತೊಳೆಯಿರಿ. ಹದ ಬಿಸಿ ನೀರಿನಲ್ಲಿ ತೊಳೆಯಿರಿ. ಕೂದಲು ತೊಳೆಯರು ಸೀಗೆ ಕಾಯಿ ಪುಡಿ ಅಥವಾ ನೀವು ಬಳಸುವ ಶ್ಯಾಂಪೂ ಹಾಕಬಹುದು.
ನಂತರ ಕೂದಲನ್ನು ಒರೆಸಿ, ಕೂದಲನ್ನು ಹರಡಿ ಬಿಟ್ಟು ಒಣಗಿಸಿ. ಕೂದಲು ಒಣಗಿಸಲು ಫ್ಯಾನ್ ಅಥವಾ ಹೇರ್ ಡ್ರೈಯರ್ ಬಳಸಬೇಡಿ.
ಈ ರೀತಿ ವಾರಕ್ಕೊಮ್ಮೆ ಮೊದ-ಮೊದಲು ಮಾಡಿ, ಕೂದಲು ನುಣಪಾದ ಮೇಲೆ 15 ದಿನಕ್ಕೊಮ್ಮೆ ಮಾಡಿದರೂ ಸಾಕು.
PublicNext
14/09/2021 11:57 am