ಬಾಳೆಹಣ್ಣನ್ನು ಹಾಕಿ ಮಾಡಲಾಗುವ ಈ ಮಂಗಳೂರು ಬನ್ಸ್ ನೋಡಲು ಪೂರಿಯಂತೆ ಇರುತ್ತದೆ. ತಿನ್ನಲು ಸ್ವಲ್ಪ ಸಿಹಿಯಾಗಿ, ಮೃದುವಾಗಿರುವ ಇದನ್ನು ಉಡುಪಿ ಮಂಗಳೂರು ಕಡೆ ಕೇವಲ ಸಂಜೆ ಚಹಾ ಸಮಯಕ್ಕಷ್ಟೇ ಅಲ್ಲದೆ ಬೆಳಗಿನ ಉಪಹಾರಕ್ಕೂ ಮಾಡಲಾಗುತ್ತದೆ. ಇದನ್ನು ಬಾಳೆಹಣ್ಣಿನ ಪೂರಿ ಎಂತಲೂ ಕರೆಯಲಾಗುತ್ತದೆ. ಇದನ್ನು ಹಾಗೆಯೇ ತಿನ್ನಬಹುದಾದರೂ, ಹೆಚ್ಚಾಗಿ ಕಾಯಿ ಚಟ್ನಿ ಮತ್ತು/ ಅಥವಾ ಸಾಂಬಾರ್ ಜೊತೆ ಬಡಿಸಲಾಗುತ್ತದೆ .
PublicNext
18/08/2021 03:01 pm