ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರಶಿನದ ಎಲೆ ಕಡುಬು

ಬೇಕಾಗುವ ಸಾಮಾಗ್ರಿಗಳು: ದೋಸೆ ಅಕ್ಕಿ/ಕುಚ್ಚಲಕ್ಕಿ- 2 ಕಪ್, ಬೆಲ್ಲ – 1 ಕಪ್, ತೆಂಗಿನತುರಿ – 1 ಕಪ್, ಅರಶಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಎಳ್ಳು – ಸ್ವಲ್ಪ

ಮಾಡುವ ವಿಧಾನ: 2 ಗಂಟೆ ಕಾಲ ನೆನೆಸಿದ ದೋಸೆ ಅಕ್ಕಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ (ಕುಚ್ಚಲಕ್ಕಿಯಾದ್ರೆ 6 ಗಂಟೆ ಕಾಲ ನೆನೆಸಿಡಬೇಕು). ನೀರು ಜಾಸ್ತಿ ಸೇರಿಸದೆ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಬಳಿಕ ಇನ್ನೊಂದು ಪಾತ್ರೆಯಲ್ಲಿ 1 ಕಪ್ ಬೆಲ್ಲವನ್ನು ತುರಿದು ಅದಕ್ಕೆ 1 ಕಪ್ ಕಾಯಿತುರಿ ಸೇರಿಸಿ ಮಿಕ್ಸ್ ಮಾಡಿ.

ಈ ಮಿಶ್ರಣಕ್ಕೆ ಹುರಿದ ಕಪ್ಪು ಎಳ್ಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅರಶಿನ ಎಲೆ ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟನ್ನು ಸವರಿ ಇದರ ಮೇಲೆ ಬೆಲ್ಲ, ಕಾಯಿತುರಿಯ ಮಿಶ್ರಣವನ್ನು ಹಾಕಿ ಎಲೆಯನ್ನು ಮಡಚಿ. ನಂತರ ಇದನ್ನು ಇಡ್ಲಿ ಪಾತ್ರೆಯಲ್ಲಿಟ್ಟು 10-15 ನಿಮಿಷ ಕಾಲ ಹಬೆಯಲ್ಲಿ ಬೇಯಿಸಿದರೆ ಅರಶಿನ ಎಲೆ ಕಡುಬು ರೆಡಿ.

Edited By : Nirmala Aralikatti
PublicNext

PublicNext

06/08/2021 05:48 pm

Cinque Terre

24.03 K

Cinque Terre

1