ಚಪಾತಿ, ಪರೋಟ ಮಾಡುವಾಗ ತರಕಾರಿಯನ್ನು ಸೇರಿಸಿ ಮಾಡಿಕೊಟ್ಟರೆ ಮಕ್ಕಳು ಖುಷಿಯಿಂದ ತಿನ್ನುತ್ತಾರೆ. ಒಮ್ಮೆ ಬೀಟ್ರೂಟ್ ಪರೋಟ ಮಾಡಿ ನೋಡಿ.
ಬೇಕಾಗುವ ಸಾಮಾಗ್ರಿಗಳು:
ಬೀಟ್ರೂಟ್ ಪ್ಯೂರಿ-1/2 ಕಪ್, ಗೋಧಿ ಹಿಟ್ಟು-2 ಕಪ್, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ-ಸ್ವಲ್ಪ, ಪನ್ನೀರ್-1 ಕಪ್ ತುರಿದದ್ದು, ಬೆಳ್ಳುಳ್ಳಿ-2 ಎಸಳು, ಒಣಮೆಣಸು-2, ಜೀರಿಗೆ ಪುಡಿ-1 ಟೀ ಸ್ಪೂನ್,
ಮಾಡುವ ವಿಧಾನ:
ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು ಸೇರಿಸಿ ಅದಕ್ಕೆ ಬೀಟ್ರೂಟ್ ಪ್ಯೂರಿ ಸೇರಿಸಿ ಚೆನ್ನಾಗಿ ನಾದಿಕೊಳ್ಳಿ. ನಂತರ ಒಂದು ಬೌಲ್ ಗೆ ಪನ್ನೀರ್ ತುರಿ, ಚಿಕ್ಕದಾಗಿ ಕತ್ತರಿಸಿಕೊಂಡ ಬೆಳ್ಳುಳ್ಳಿ, ಜೀರಿಗೆ ಪುಡಿ, ಒಣಮೆಣಸು ಸ್ವಲ್ಪ, ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ನಂತರ ನಾದಿ ಇಟ್ಟುಕೊಂಡ ಬೀಟ್ರೂಟ್ ಮಿಶ್ರಣದಿಂದ ಪರೋಟ ತಯಾರಿಸಿ ಅದರ ಒಳಗೆ ಪನ್ನೀರ್ ಮಿಶ್ರಣ ಸೇರಿಸಿ ಮತ್ತೊಮ್ಮೆ ನಾದಿಕೊಳ್ಳಿ. ನಂತರ ಕಾದ ಪ್ಯಾನಿಗೆ ತುಪ್ಪ ಸವರಿ ಈ ಪರೋಟವನ್ನು ಎರಡು ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ.
PublicNext
03/08/2021 11:32 am