4 ಮೊಟ್ಟೆ, 1 ಕಪ್- ಅಕ್ಕಿ, 2 ಹಸಿಮೆಣಸು, 1 ಟೇಬಲ್ ಸ್ಪೂನ್ ಶುಠಿ ಬೆಳ್ಳುಳ್ಳಿ ಪೇಸ್ಟ್, 1 ಚಮಚ ಖಾರದಪುಡಿ, 1 ಚಮಚ ಧನಿಯಾ ಪಡಿ, 1 ಟೀ ಸ್ಪೂನ್-ಅರಿಶಿನ, ಬಿರಿಯಾನಿ ಮಸಾಲ-1 ಚಮಚ, 2- ಈರುಳ್ಳಿ, 1-ಟೊಮೆಟೊ, ತುಪ್ಪ-2 ಟೇಬಲ್ ಸ್ಪೂನ್, ಏಲಕ್ಕಿ-2, ಲವಂಗ-1, ಚಕ್ಕೆ- ಒಂದು ಸಣ್ಣ ತುಂಡು, ಪಲಾವ್ ಎಲೆ-1, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು-ಸ್ವಲ್ಪ, ಮೊಸರು-1/4 ಕಪ್ ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:ಮೊದಲಿಗೆ ಅಕ್ಕಿಯನ್ನು ಅರ್ಧ ಗಂಟೆ ನೆನಸಿಡಿ. ಮೊಟ್ಟೆಯನ್ನು ಬೇಯಿಸಿ ಸಿಪ್ಪೆ ತೆಗೆದುಕೊಂಡಿರಿ. ಒಂದು ಕುಕ್ಕರ್ ಗೆ ತುಪ್ಪ ಹಾಕಿ. ಅದು ಬಿಸಿಯಾಗುತ್ತಲೆ ಅದಕ್ಕೆ ಏಲಕ್ಕಿ, ಲವಂಗ, ಪಲಾವ್ ಎಲೆ, ಚಕ್ಕೆ ಹಾಕಿ. ನಂತರ ಈರುಳ್ಳಿ ಹಾಕಿ ಅದು ಕೆಂಪಾಗುತ್ತಲೆ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಹಾಕಿ.
ನಂತರ ಸ್ವಲ್ಪ ಪುದೀನಾ ಸೊಪ್ಪು, ಸ್ವಲ್ಪ-ಕೊತ್ತಂಬರಿ ಸೊಪ್ಪು ಹಾಕಿ ನಂತರ ಟೊಮೆಟೊ ಹಾಕಿ. ಅದು ಮೆತ್ತಗಾದ ನಂತರ ಅದಕ್ಕೆ ಅರಿಶಿನ ಪುಡಿ, ಧನಿಯಾ ಪುಡಿ, ಖಾರದ ಪುಡಿ, ಬಿರಿಯಾನಿ ಮಸಾಲ, ಸ್ವಲ್ಪ ಉಪ್ಪು, ಮೊಸರು ಹಾಕಿ. ನಂತರ ಸಿಪ್ಪೆ ತೆಗೆದ ಮೊಟ್ಟೆಯನ್ನು ಚಾಕುವಿನಿಂದ ಸ್ವಲ್ಪ ಸೀಳಿಕೊಂಡು ಕುಕ್ಕರ್ ನಲ್ಲಿರುವ ಮಸಾಲಕ್ಕೆ ಹಾಕಿ. ನಿಧಾನಕ್ಕೆ ತಿರುಗಿಸಿ. ನಂತರ ಇದಕ್ಕೆ 2 ಕಪ್ ಬಿಸಿ ನೀರು ಹಾಕಿ. ಆಮೇಲೆ ಅಕ್ಕಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2 ವಿಷಲ್ ಕೂಗಿಸಿಕೊಳ್ಳಿ.
PublicNext
28/07/2021 12:12 pm