ಕೆಲವರಿಗೆ ಊಟಕ್ಕಿಂತ ಸಲಾಡ್ ಮಾಡಿಕೊಂಡು ತಿನ್ನುವುದು ಇಷ್ಟವಾಗುತ್ತದೆ. ಹಾಗಿದ್ರೆ ಈ ಸಲಾಡ್ ಮಾಡಿಕೊಂಡು ಬ್ಯಾಟಿಂಗ್ ಮಾಡಿ..
ಬೇಕಾಗುವ ಸಾಮಗ್ರಿಗಳು:
2 ಕಪ್-ಚನ್ನಾ ಕಡಲೆಕಾಳು, ½ ಕಪ್-ಕತ್ತರಿಸಿದ ಈರುಳ್ಳಿ, ½ ಕಪ್- ಕತ್ತರಿಸಿದ ಸೌತೆಕಾಯಿ, ½ ಕಪ್-ಕತ್ತರಿಸಿದ ಟೊಮೆಟೊ, ¼ ಕಪ್-ಕೊತ್ತಂಬರಿ ಸೊಪ್ಪು, ಲಿಂಬೆಹಣ್ಣಿನ ರಸ-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ½ ಕಪ್- ಮೊಸರು, ¼ ಕಪ್-ಪುದೀನಾ ಎಲೆ, ½ ಟೀ ಸ್ಪೂನ್-ಕಾಳುಮೆಣಸಿನ ಪುಡಿ.
ಮಾಡುವ ವಿಧಾನ:
ಕಡಲೆಕಾಳನ್ನು ಚೆನ್ನಾಗಿ ತೊಳೆದು 5 ಗಂಟೆಗಳ ಕಾಲ ನೆನೆಸಿಡಿ. ನಂತರ ಕುಕ್ಕರ್ ಗೆ 1 ½ ಕಪ್ ನೀರು ಹಾಕಿ ಅದಕ್ಕೆ ಕಡಲೆಕಾಳು ಹಾಕಿ ಅದಕ್ಕೆ ಉಪ್ಪು ಸೇರಿಸಿ 2 ವಿಷಲ್ ಕೂಗಿಸಿಕೊಳ್ಳಿ. ಕಡಲೆಕಾಳು ತುಂಬಾ ಬೇಯುವುದು ಬೇಡ. ಬೆಂದ ಕಡಲೆಕಾಳಿನ ನೀರು ಬಸಿದುಕೊಂಡು ಅದು ತಣ್ಣಗಾದ ಮೇಲೆ ಒಂದು ಬೌಲ್ ಗೆ ಹಾಕಿ. ನಂತರ ಇದಕ್ಕೆ ಕತ್ತರಿಸಿದ ಸೌತೆಕಾಯಿ, ಕೊತ್ತಂಬರಿಸೊಪ್ಪು, ಈರುಳ್ಳಿ, ಪುದೀನಾ ಸೊಪ್ಪು, ಮೊಸರು, ಕಾಳುಮೆಣಸಿನ ಪುಡಿ, ಉಪ್ಪು, ಲಿಂಬೆಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿ ಸವಿಯಿರಿ.
PublicNext
28/01/2021 03:36 pm