ಅಂಡರ್ ಆರ್ಮ್ಸ್ ಕೂದಲು ತೆಗೆಯಲು ವ್ಯಾಕ್ಸಿಂಗ್, ರೇಜರ್, ಕ್ರೀಂ ಬಳಕೆ ಮಾಡುವುದು ಸಾಮಾನ್ಯ.ಮನೆ ಮದ್ದಿನಿಂದ ಶಾಶ್ವತವಾಗಿ ಅಂಡರ್ ಆರ್ಮ್ಸ್ ಕೂದಲನ್ನು ತೆಗೆದು ಹಾಕಬಹುದು.
ಅರಿಶಿನ ನಿಮ್ಮ ಈ ಸಮಸ್ಯೆಗೆ ಶಾಶ್ವತ ಪರಿಹಾರ. ½ ಕಪ್ ಅರಿಶಿನಕ್ಕೆ ರೋಸ್ ವಾಟರ್ ಹಾಗೂ ಬೆಚ್ಚಗಿನ ನೀರು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಅಂಡರ್ ಆರ್ಮ್ಸ್ ಗೆ ಹಚ್ಚಿ 30 ನಿಮಿಷ ಬಿಡಿ. ನಂತ್ರ ಬೆಚ್ಚಗಿನ ನೀರಿನಲ್ಲಿ ಟವೆಲ್ ಅದ್ದಿ ಅದ್ರ ಸಹಾಯದಿಂದ ಅಂಡರ್ ಆರ್ಮ್ಸ್ ಕ್ಲೀನ್ ಮಾಡಿ. ನಂತ್ರ ಇನ್ನೊಮ್ಮೆ ಮಿಶ್ರಣ ಹಚ್ಚಿ ಮತ್ತೆ ಕ್ಲೀನ್ ಮಾಡಿಕೊಳ್ಳಿ. ಉಳಿದಿದ್ದ ಸಣ್ಣ ಕೂದಲು ಕೂಡ ಇದ್ರಿಂದ ಸ್ವಚ್ಛವಾಗುತ್ತದೆ.
ಅಡುಗೆ ಸೋಡಾದಿಂದ ಕೂಡ ನೀವು ಅಂಡರ್ ಆರ್ಮ್ಸ್ ಕೂದಲಿಗೆ ಗುಡ್ ಬೈ ಹೇಳಬಹುದು. ಅಡುಗೆ ಸೋಡಾ ಹಾಗೂ ನೀರನ್ನು ಮಿಕ್ಸ್ ಮಾಡಿ ಗಟ್ಟಿಯಾದ ಮಿಶ್ರಣ ತಯಾರಿಸಿಕೊಳ್ಳಿ. ರಾತ್ರಿ ಮಲಗುವ ಮೊದಲು ಇದನ್ನು ಅಂಡರ್ ಆರ್ಮ್ಸ್ ಗೆ ಹಚ್ಚಿಕೊಳ್ಳಿ. ಬೆಳಿಗ್ಗೆ ಎದ್ದ ತಕ್ಷಣ ಕ್ಲೀನ್ ಮಾಡಿ. ಕೂದಲು ಉದುರಿರುವ ಜಾಗಕ್ಕೆ ಕ್ರೀಂ ಹಚ್ಚಿ. ಬೇಕಿಂಗ್ ಸೋಡಾ ಚರ್ಮವನ್ನು ಒಣಗಿಸುತ್ತದೆ. ಹಾಗಾಗಿ ಕ್ರೀಂ ಹಚ್ಚಿಕೊಳ್ಳುವುದು ಉತ್ತಮ.
PublicNext
13/01/2021 04:12 pm