ಗೋಡಂಬಿ ಬರ್ಫಿ ತಿನ್ನಲು ಮಕ್ಕಳು ಮಾತ್ರವಲ್ಲ ಹಿರಿಯರು ಕೂಡ ತುಂಬಾನೆ ಇಷ್ಟ ಪಡುತ್ತಾರೆ.
ಆದ್ದರಿಂದ ನವರಾತ್ರಿಗೆ ಹೊರಗಡೆಯಿಂದ ಸಿಹಿ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಏನಾದರೂ ಸಿಹಿ ತಯಾರಿಸಿ ಸವಿಯಿರಿ.
ಗೋಡಂಬಿ, ಸಕ್ಕರೆ, ತುಪ್ಪ ಹಾಕಿ ಮಾಡುವ ಬರ್ಫಿ ತುಂಬಾ ರುಚಿಕರವಾಗಿದ್ದು, ಮಾಡುವ ವಿಧಾನ ನೋಡಿ ಇಲ್ಲಿದೆ.
ಗೋಡಂಬಿ ಬರ್ಫಿಗೆ ಬೇಕಾಗುವ ಸಾಮಗ್ರಿಗಳು:
ಗೋಡಂಬಿ - ಒಂದು ಕಪ್, ಸಕ್ಕರೆ - ಒಂದು ಕಪ್, ಅರ್ಧ ಕಪ್ ಹಾಲು, ಕಂಡೆನ್ಸ್ಡ್ ಮಿಲ್ಕ್ ಸ್ವಲ್ಪ, ಒಂದು ಟಿನ್ ತುಪ್ಪ, ಎರಡು ದೊಡ್ಡ ಚಮಚ ಏಲಕ್ಕಿ ಪುಡಿ
ತಯಾರಿಸುವ ವಿಧಾನ:
ಗೋಡಂಬಿಯನ್ನು ಪುಡಿ ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ಹಾಲು, ಕಂಡೆನ್ಸ್ಡ್ ಮಿಲ್ಕ್ ಹಾಕಿ ಬಿಸಿ ಮಾಡಿ, ಅದಕ್ಕೆ ಗೋಡಂಬಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ, ಸ್ವಲ್ಪ ಹೊತ್ತಿನ ನಂತರ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಅದು ತಳ ಹಿಡಿಯದಂತೆ ಚೆನ್ನಾಗಿ ಕೈಯಾಡಿಸುತ್ತಿರಿ.
ಸ್ವಲ್ಪ ಹೊತ್ತಿಗೆ ಅದು ತಳ ಬಿಡುತ್ತಾ ಬರುತ್ತದೆ. ಬರ್ಫಿಯ ಹದ ಬಂದಿದೆ ಎನಿಸಿದ ತಕ್ಷಣ ತುಪ್ಪ ಸವರಿದ ತಟ್ಟೆಗೆ ಹಾಕಿ, ಸಮ ಮಾಡಿ. ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಗೋಡಂಬಿ ಬರ್ಫಿ ತಿನ್ನಲು ರೆಡಿ.
PublicNext
06/10/2020 04:36 pm