ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆಗಾಲದಲ್ಲಿ ಮುಖದ ಸೌಂದರ್ಯಕ್ಕಾಗಿ ಈ ಫೇಶಿಯಲ್ ಟ್ರೈ ಮಾಡಿ

ಮಳೆಗಾಲದಲ್ಲಿ ಬಿಸಿಲು ಸರಿಯಾಗಿ ಇರುವುದಿಲ್ಲ, ತ್ವಚೆ ಕೂಡ ಒಣಗುವುದು ಇವೆಲ್ಲಾ ತ್ವಚೆಯನ್ನು ಕಳೆಗುಂದುವಂತೆ ಮಾಡುವುದು. ಬೇಸಿಗೆಯಲ್ಲಿ ಬಳಸುವ ಫೇಶಿಯಲ್ ಮಳೆಗಾಲಕ್ಕೆ ಸೂಕ್ತವಲ್ಲ. ಕೆಲವೊಂದು ಹಣ್ಣಿನ ಫೇಶಿಯಲ್ ಎಲ್ಲಾ ಕಾಲಕ್ಕೂ ಸೂಕ್ತ. ಮಳೆಗಾಲದಲ್ಲಿ ಈ 3 ತರಹದ ಫೇಶಿಯಲ್ ಮುಖಕ್ಕೆ ಕಾಂತಿ ಕೊಡುತ್ತದೆ‌.

* ಕಡಲೆಹಿಟ್ಟು, ನಿಂಬೆರಸ ಫೇಶಿಯಲ್

ಇದನ್ನು ಒಣ ತ್ವಚೆ ಇರುವವರು ಬಳಸಬೇಡಿ, ಏಕೆಂದರೆ ಕಡಲೆ ಹಿಟ್ಟು ತ್ವಚೆಯನ್ನು ಮತ್ತಷ್ಟು ಡ್ರೈಯಾಗಿಸಬಹುದು. ಎಣ್ಣೆ ತ್ವಚೆಯವರಿಗೆ ಹಾಗೂ ಸಾಮಾನ್ಯ ತ್ವಚೆಯವರಿಗೆ ಈ ಫೇಶಿಯಲ್ ತುಂಬಾ ಒಳ್ಳೆಯದು.

ನಿಮಗೆ ಬೇಕಾದ ಸಾಮಗ್ರಿ

1ಚಮಚ ಕಡಲೆಹಿಟ್ಟು

1 ಚಮಚ ರೋಸ್ ವಾಟರ್

4 ಹನಿ ನಿಂಬೆ ರಸ

ಬಳಸುವ ವಿಧಾನ

ಈ ಮೂರು ಸಾಮಗ್ರಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ ಮುಖದ ಹೊಳಪು ಹೆಚ್ಚುವುದು.

* ಕಹಿಬೇವು, ನಿಂಬೆರಸ, ಫೇಶಿಯಲ್

ಎಣ್ಣೆ ತ್ವಚೆಯವರಿಗೆ ಹೇಳಿ ಮಾಡಿಸಿದ ಫೇಶಿಯಲ್ ಇದಾಗಿದೆ. ಅಲ್ಲದೆ ಇದು ಮೊಡವೆ ನಿಯಂತ್ರಣಕ್ಕೂ ಒಳ್ಳೆಯದು, ಮುಖದಲ್ಲಿರುವ ಕಲೆಗಳು ಕೂಡ ಇಲ್ಲವಾಗುವುದು.

ಬೇಕಾಗುವ ಸಾಮಗ್ರಿ 2 ಚಮಚ ಕಹಿಬೇವಿನ ಪುಡಿ 2 ಚಮಚ ರೋಸ್ ವಾಟರ್ 1 ಚಮಚ ನಿಂಬೆರಸ ಮಾಡುವ ವಿಧಾನ ಎಲ್ಲವನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ 2 ಬಾರಿ ಮಾಡಿ ಮುಖದ ಹೊಳಪು ಹೆಚ್ಚುವುದು.

* ಮುಲ್ತಾನಿಮಿಟಿ ಫೇಶಿಯಲ್‌

ಇದನ್ನು ಎಲ್ಲ ತರಹ ತ್ವಚೆಯವರೂ ಬಳಸಬಹುದು

ಬೇಕಾಗುವ ಸಾಮಗ್ರಿ

1 ಚಮಚ ಮುಲ್ತಾನಿಮಿಟಿ

1 ಚಮಚ ರೋಸ್ ವಾಟರ್

ಬಳಕೆಯ ವಿಧಾನ:

ಒಂದು ಬೌಲ್‌ನಲ್ಲಿ ಮುಲ್ತಾನಿಮಿಟಿ, ರೋಸ್ ವಾಟರ್ ಮಿಶ್ರ ಮಾಡಿ. ಅದನ್ನು ಹಚ್ಚುವ ಮುನ್ನ ಮುಖ ಸ್ವಚ್ಛ ಮಾಡಿ. 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ ಒಂದು ಬಾರಿ ಮಾಡಿದರೆ ಸಾಕು.

ಮಳೆಗಾಲದಲ್ಲಿ ಮನೆಯಲ್ಲೇ ಈ ೩ ಬಗೆಯಲ್ಲಿ ನಿಮಗೆ ಅನುಕೂಲವಾಗುವ ಇಷ್ಟವಾಗುವ ಫೇಶಿಯಲ್ ಪ್ರಯತ್ನಿಸಿ.‌ಮುಳದ ಕಾಂತಿ ಹೆಚ್ಚಿಸಿಕೊಳ್ಳಿ.

Edited By :
PublicNext

PublicNext

25/09/2020 06:04 pm

Cinque Terre

31.16 K

Cinque Terre

0