ತಲೆ ಕೂದಲು ಸೌಂದರ್ಯಕ್ಕೆ ಕಾರಣ. ಪ್ರತಿಯೊಬ್ಬರ ಅಂದ ತಲೆ ಕೂದಲಿನಿಂದ ಹೆಚ್ಚುತ್ತದೆ. ಹೆಣ್ಣುಮಕ್ಕಳ ಸೌಂದರ್ಯ ಕಾಂತಿಯ ಗುಟ್ಟು ಅಡಗಿರುವುದು ತಲೆಕೂದಲಿಂದ.ಅದು ಶಿರೋಭೂಷಣ.
ತಲೆಕೂದಲು ಉದ್ದ ಬೆಳೆಸಬೇಕೆಂದು ಇಚ್ಚಿಸಿರುತ್ತಿರಾ.? ಏನು ಮಾಡಲಿ ಎಂದು ನೀವು ಆಲೋಚಿಸುತ್ತಿದ್ದಿರಾ ? ನಾವು ಎಷ್ಟೇ ಎಚ್ಚರಿಕೆ ವಹಿಸಿದರೂ ನಮಗೇ ಗೊತ್ತಿಲ್ಲದೆ ಕೂದಲಿನ ವಿಷಯದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಕೆಲವೊಂದು ಯೂಸ್‌ಫುಲ್ ಟಿಪ್ಸ್ ಇಲ್ಲಿದೆ ನೋಡಿ.
1. ಸರಿಯಾದ ರೀತಿಯಲ್ಲಿ ಕೂದಲನ್ನು ತೊಳೆಯಿರಿ:
ಮೊದಲಿಗೆ ಆಂಟಿ ಬ್ಯಾಕ್ಟಿರಿಯಾ ಶ್ಯಾಂಪೂ ಬಳಸಿ, ಇದು ನಿಮ್ಮ ತಲೆ ಬುಡವನ್ನು ಸ್ವಚ್ಛವಾಗಿ ಇಡುತ್ತದೆ. ಮತ್ತೊಂದು ವಿಷಯವೆಂದರೆ ತಲೆಯನ್ನು ಪ್ರತಿದಿನ ತೊಳೆಯಬೇಡಿ, ವಾರದಲ್ಲಿ 2-3 ಬಾರಿ ತೊಳೆದರೆ ಸಾಕು
2.ಕಂಡಿಷನರ್ ಬಳಸಿ:
ಕೂದಲು ನೋಡಲು ಆಕರ್ಷಕವಾಗಿ ಕಾಣಬೇಕೆಂದರೆ ಕಂಡೀಷನರ್ ಬಳಸಿ, ಇದು ದೂಳು, ಕೂದಲಿನ ಮಾಯಿಶ್ಚರೈಸರ್ ಕಾಪಾಡುತ್ತದೆ. ಕೆಮಿಕಲ್ ಇಲ್ಲದ ಕಂಡೀಷನರ್ ಬೇಕೆಂದರೆ ಮೊಸರು, ಮೊಟ್ಟೆ ಇವುಗಳನ್ನು ಬಳಸಬಹುದು, ಇದರಿಂದ ಕೂದಲಿನ ಬುಡಕ್ಕೆ ಬೇಕಾದ ಪ್ರೊಟೀನ್ ದೊರೆಯುತ್ತದೆ, ಕೂದಲು ಕೂಡ ಉದ್ದವಾಗಿ ಬೆಳೆಯುತ್ತದೆ
3.ಕೂದಲನ್ನು ಟ್ರಿಮ್ ಮಾಡಿ :
ಕೂದಲು ಉದ್ದ ಬೆಳೆಯಬೇಕೆಂದರೆ ಅದರ ತುದಿ ಟ್ರಿಮ್ ಮಾಡಬೇಕು, ಇಲ್ಲದಿದ್ದರೆ ಕೂದಲಿನ ತುದಿ splitಅಂದರೆ ಕವಲೊಡೆಯುವುದು, ಇದರಿಂದಾಗಿ ಕೂದಲು ಉದ್ದ ಬೆಲೆಯುವುದೇ ಇಲ್ಲ.
4. ವಾರಕ್ಕೊಮ್ಮೆ ಕೂದಲಿಗೆ ಎಣ್ಣೆ ಮಸಾಜ್ ಮಾಡಿ:
ಕೂದಲಿನ ಪೋಷಣೆಗೆ ಎಣ್ಣೆ ಮಸಾಜ್ ಅಗ್ಯತ. ಕೂದಲಿಗೆ ಎಣ್ಣೆ ಹಚ್ಚಿ, ಒಂದು ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ಹಿಂಡಿ ಅದನ್ನು ತಲೆಗೆ ಸುತ್ತಿ, ಇದರಿಂದ ಕೂದಲಿನ ಬುಡ ಚೆನ್ನಾಗಿ ಎಣ್ಣೆ ಹೀರಿಕೊಳ್ಳುತ್ತದೆ, ನಂತರ ಮೈಲ್ಡ್ ಶ್ಯಾಂಪೂ ಹಚ್ಚಿ ತೊಳೆಯಿರಿ. ಹರಳೆಣ್ಣೆ, ತೆಂಗಿನೆಣ್ಣೆ ಹೀಗೆ ನಿಮಗೆ ಸೂಕ್ತವಾದ ಎಣ್ಣೆ ಹಚ್ಚಿ.
5. ಒದ್ದೆ ಕೂದಲನ್ನು ಬಾಚಬೇಡಿ :
ಇನ್ನು ಒದ್ದೆ ಕೂದಲನ್ನು ಬಾಚಲೇಬಾರದು, ಕೆಲವರಿಗೆ ಈ ರೀತಿಯ ಅಭ್ಯಾಸವಿರುತ್ತದೆ. ಒದ್ದೆ ಕೂದಲನ್ನು ಬಾಚುವುದರಿಂದ ಕೂದಲು ಉದುರುವ ಸಮಸ್ಯೆ ಉಂಟಾಗುವುದು.
6. ಸುಡುವ ಬಿಸಿ ನೀರಿನ ಸ್ನಾನ ಮಾಡಬೇಡಿ :
ಯಾವತ್ತೂ ಕೂದಲಿಗೆ ನೀರು ಹಾಕುವಾಗ ಉಗುರು ಬೆಚ್ಚಗಿನ ನೀರು ಹಾಕಿ, ಮೈಗೆ ಹಾಕುವಷ್ಟು ಉಷ್ಣತೆಯಲ್ಲಿ ತಲೆಗೆ ನೀರು ಹಾಕಬೇಡಿ, ಇದರಿಂದ ಕೂದಲಿನ ಬುಡ ಹಾಳಾಗುವುದು. ಸುಡು ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಕೂದಲಿನ ಬುಡ ಒಣಗುವುದು, ಇದು ಕೂದಲಿನ ಆರೋಗ್ಯ ಹಾಳು ಮಾಡುತ್ತದೆ.
7. ಬ್ಲೀಚ್ ಅಥವಾ ಹೇರ್ ಕಲರ್ ಹಚ್ಚಬೇಡಿ :
ಬ್ಲೀಚ್ ಅಥವಾ ಹೇರ್ ಕಲರ್ ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಕೂದಲಿನ ಬುಡಕ್ಕೆ ಹಾನಿಯಾಗುವುದು, ಕೂದಲು ಹಾಳಾಗುವುದು. ಕೂದಲು ಉದ್ದ ಬೆಳೆಸಲು ಇಚ್ಚಿಸುವವರು ಮದರಂಗಿ ಗಿಡದ ಎಲೆಯನ್ನು ರುಬ್ಬಿ, ಅದಕ್ಕೆ ಬೀಟ್ ರೂಟ್ ರಸ ಸೇರಿಸಿ ಹಚ್ಚಿ, ಕೂದಲು ಕೆಂಚು ಬಣ್ಣದಲ್ಲಿ ಕಾಣುವಂತೆ ಮಾಡಬಹುದು.
ಈ ಸಿಂಪಲ್ 7 ಟಿಪ್ಸ್ ಪಾಲಿಸಿದರೆ ಸಾಕು ನಿಮ್ಮ ತಲೆ ಕೂದಲು ಉದ್ದವಾಗಿ ಬೆಳೆಯುವುದು. ನಿಮ್ಮ ಅಂದ ಹೆಚ್ಚುವುದು
PublicNext
27/09/2020 03:23 pm