ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಣ್ಣೆ ಹಚ್ಚಿದ್ರು ಕೂದಲು ಉದುರುತ್ತೆ ಹಾಗಿದ್ರೆ ಹೀಗೆ ಮಾಡಿ

ಮಹಿಳೆಯರಿಗಾಗಲಿ ಅಥವಾ ಪುರುಷರಿಗಾಗಲಿ ಕೂದಲು ಬಹು ಮುಖ್ಯ.

ಉತ್ತಮವಾದ ಕೂದಲು ಸೌಂದರ್ಯಕ್ಕೆ ಒಂದು ಆಭರಣವಿದ್ದಂತೆ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆಯಿಂದ ಎಲ್ಲ ವಯೋಮಾನದವರು ಬೇಸತ್ತು ಹೋಗುತ್ತಿದ್ದಾರೆ.

ಉದುರುವ ಕೂದಲ ರಕ್ಷಣೆಗಾಗಿ ನಿತ್ಯ ಎಣ್ಣೆ ಹಚ್ಚುತ್ತೇನೆ, ಆದರೂ ಕೂದಲು ಉದುರುತ್ತದೆ ಎಂದು ಹೇಳುವವರು ಹೆಚ್ಚು.

ಇದಕ್ಕೆ ಕಾರಣ ನೀವು ಮಾಡುವ ಕೆಲವು ತಪ್ಪುಗಳು. ಅವುಗಳು ಯಾವುವು ಗೊತ್ತೇ?

ಕೂದಲಿಗೆ ಎಣ್ಣೆ ಹಚ್ಚಿದ ತಕ್ಷಣ ಸ್ನಾನ ಮಾಡುವುದರಿಂದ ಅಥವಾ ತಲೆ ತೊಳೆದುಕೊಳ್ಳುವುದರಿಂದ ಎಣ್ಣೆಯ ಯಾವುದೇ ಪ್ರಯೋಜನಗಳು ನಿಮಗೆ ಲಭ್ಯವಾಗುವುದಿಲ್ಲ.

ಅದರ ಬದಲು ಎಣ್ಣೆ ಹಚ್ಚಿ ಒಂದರಿಂದ ಎರಡು ಗಂಟೆಯೊಳಗೆ ಸ್ನಾನ ಮಾಡಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ರಾತ್ರಿ ಎಣ್ಣೆ ಹಚ್ಚಿ ಬೆಳಿಗ್ಗೆ ಸ್ನಾನ ಮಾಡುವುದು ಒಳ್ಳೆಯದು. ಆದರೆ ಎಣ್ಣೆ ಹಚ್ಚಿದಾಕ್ಷಣ ನಿಮ್ಮ ಕೂದಲನ್ನು ಗಟ್ಟಿಯಾಗಿ ಬಾಚಬೇಡಿ. ಆಗ ಕೂದಲು ಮೃದುವಾಗಿರುತ್ತದೆ.

ನೀವು ಗಟ್ಟಿಯಾಗಿ ಬಾಚಿಕೊಂಡರೆ ಕೂದಲು ಒಡೆಯುವ ಅಥವಾ ತುಂಡಾಗುವ ಸಾಧ್ಯತೆಗಳು ಹೆಚ್ಚು.

15 ನಿಮಿಷಕ್ಕಿಂತ ಹೆಚ್ಚು ಹೊತ್ತು ಮಸಾಜ್ ಒಳ್ಳೆಯದಲ್ಲ.

ಸಾಧ್ಯವಾದಷ್ಟು ಕಡಿಮೆ ರಾಸಾಯನಿಕ ಅಂಶಗಳನ್ನು ಬಳಸಿ ತಯಾರಿಸಿದ ಶಾಂಪೂವನ್ನೇ ಬಳಸಿ.

ಸೀಗೆಕಾಯಿ ಬಳಸುವುದು ಭಾರಿ ಒಳ್ಳೆಯದು. ಆದರೆ ಇದರ ಲಭ್ಯತೆ ಎಲ್ಲರಿಗೂ ಸಿಗದು. ಹಾಗಾಗಿ ಗುಣಮಟ್ಟದ ಶಾಂಪೂ ಬಳಸಿ.

Edited By : Nirmala Aralikatti
PublicNext

PublicNext

16/12/2020 03:13 pm

Cinque Terre

24.63 K

Cinque Terre

1