ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂದಲಿನ ಆರೋಗ್ಯಕ್ಕೆ ಈ ಬೀಜಗಳು ತುಂಬಾನೆ ಮುಖ್ಯ

ಕೂದಲಿಗೆ ಸರಿಯಾದ ಪೋಷಕಾಂಶಗಳು ಸಿಗದೆ ಕೂದಲಿನ ಸಮಸ್ಯೆಗಳು ಕಾಡುತ್ತದೆ.

ಹಾಗಾಗಿ ಕೂದಲಿನ ಆರೋಗ್ಯ ಕಾಪಾಡಲು ಈ ಬೀಜಗಳನ್ನು ನಿತ್ಯ ನಿಮ್ಮ ಆಹಾರದಲ್ಲಿ ಬಳಸಿ.

*ಎಳ್ಳು : ಇದು ಕೂದಲಿನ ಬೆಳವಣೆಗೆ ಸಹಕಾರಿ. ಇದನ್ನು ಬಳಸುವುದರಿಂದ ಕೂದಲುದುರುವ ಸಮಸ್ಯೆ ದೂರವಾಗಿ ಕೂದಲು ದಪ್ಪವಾಗಿ, ಉದ್ದವಾಗಿ ಬೆಳೆಯುತ್ತದೆ.

*ಸೂರ್ಯಕಾಂತಿ ಬೀಜ : ಈ ಬೀಜಗಳು ಕೂಡ ಕೂದಲಿನ ಆರೋಗ್ಯವನ್ನು ಕಾಪಾಡುತ್ತವೆ. ಇದು ಕೂದಲಿನ ಬುಡವನ್ನು ಗಟ್ಟಿಯಾಗಿಸಿ ಕೂದಲುದುರುವ ಸಮಸ್ಯೆಯನ್ನು ನಿವಾರಿಸುತ್ತದೆ.

*ಕುಂಬಳಕಾಯಿ ಬೀಜ : ಇದರಲ್ಲಿ ಸತು, ತಾಮ್ರ, ಮೆಗ್ನೀಶಿಯಂ, ಕಬ್ಬಿಣ, ವಿಟಮಿನ್ ಎ, ಬಿ ಮತ್ತು ಸಿ ಸಮೃದ್ಧವಾಗಿದೆ. ಇವು ಕೂದಲನ್ನು ಬಲಪಡಿಸುತ್ತವೆ.

*ಅಗಸೆ ಬೀಜ : ಇದರಲ್ಲಿ ಸಾಕಷ್ಟು ಫೈಬರ್, ಪ್ರೋಟೀನ್, ಮೆಗ್ನೀಶಿಯಂ ಮತ್ತು ರಂಜಕವಿದೆ. ಇದು ಕೂದಲುದುರುವ ಸಮಸ್ಯೆಗೆ ರಾಮಬಾಣವಾಗಿದೆ.

*ಮೆಂತ್ಯಕಾಳು : ಇದು ಕೂದಲುದುರುವ ಸಮಸ್ಯೆ ದೂರವಾಗಿಸಿ, ದಪ್ಪವಾದ, ಕಪ್ಪಾದ ಕೂದಲು ಬೆಳೆಯಲು ಸಹಕಾರಿಯಾಗಿದೆ.

Edited By : Nirmala Aralikatti
PublicNext

PublicNext

03/12/2020 11:56 am

Cinque Terre

18.8 K

Cinque Terre

0