ಬೇಕಾಗುವ ಸಾಮಗ್ರಿಗಳು: ಚಿಕನ್ – ಅರ್ಧ ಕೆ.ಜಿ., ಎಣ್ಣೆ – 3 ಟೇಬಲ್ ಚಮಚ, ಈರುಳ್ಳಿ – 3 (ಮಧ್ಯಮ ಗಾತ್ರದ್ದು), ಶುಂಠಿ– ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಚಮಚ, ಹಸಿಮೆಣಸು – 5, ಅರಿಸಿನ ಪುಡಿ – 1/2 ಚಮಚ, ಮೆಣಸಿನ ಪುಡಿ – 1 ಚಮಚ, ಉಪ್ಪು – ರುಚಿಗೆ, ಕೊತ್ತಂಬರಿ – 1 ಟೇಬಲ್ ಚಮಚ, ಜೀರಿಗೆ – 1 ಚಮಚ, ಕಾಳುಮೆಣಸು – 4, ಏಲಕ್ಕಿ – 2, ಚಕ್ಕೆ – 1 ತುಂಡು, ಲವಂಗ – 3, ಗಸಗಸೆ – 1 ಟೇಬಲ್ ಚಮಚ,ಕೊತ್ತಂಬರಿ ಸೊಪ್ಪು – ಸ್ವಲ್ಪ (ಹೆಚ್ಚಿಕೊಂಡಿದ್ದು), ಮೊಸರು – 1ಕಪ್
ತಯಾರಿಸುವ ವಿಧಾನ: ತವಾ ಬಿಸಿ ಮಾಡಿ ಅದಕ್ಕೆ ಕೊತ್ತಂಬರಿ, ಜೀರಿಗೆ, ಚಕ್ಕೆ, ಏಲಕ್ಕಿ, ಕಾಳುಮೆಣಸಿನ ಪುಡಿ, ಲವಂಗ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಅದನ್ನು ಪಾತ್ರೆಯೊಂದರಲ್ಲಿ ತೆಗೆದಿಡಿ.
ಅದೇ ತವಾಗೆ ಗಸೆಗಸೆ ಹಾಕಿ ಕೆಲ ನಿಮಿಷಗಳ ಕಾಲ ಹುರಿದುಕೊಳ್ಳಿ. ಹುರಿದ ಎಲ್ಲಾ ಸಾಮಗ್ರಿಗಳನ್ನು ಪುಡಿ ಮಾಡಿಕೊಳ್ಳಿ.
ದೊಡ್ಡ ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಗೂ ಹಸಿಮೆಣಸು ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಕೆಲ ನಿಮಿಷ ಹುರಿಯಿರಿ.
ನಂತರ ಚಿಕನ್ ತುಂಡುಗಳನ್ನು ಸೇರಿಸಿ ಬಣ್ಣ ಬದಲಾಗುವವರೆಗೆ ಮತ್ತೆ ಹುರಿಯಿರಿ. ಉಪ್ಪು, ಕೆಂಪುಮೆಣಸಿನ ಪುಡಿ, ಅರಿಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕೆಲ ನಿಮಿಷಗಳ ಕಾಲ ಬೇಯಿಸಿ.
ಹುರಿದು ಪುಡಿ ಮಾಡಿಕೊಂಡ ಸಾಮಗ್ರಿಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಚೆನ್ನಾಗಿ ಬೇಯಿಸಿ.
ಸ್ವಲ್ಪ ನೀರು ಸೇರಿಸಿ ಗ್ರೇವಿ ತಯಾರಿಸಿ ಕುದಿಸಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ.
PublicNext
02/12/2020 07:42 pm