ಬೇಕಾಗುವ ಪದಾರ್ಥಗಳು
• ಕಡಲೆಹಿಟ್ಟು- 1 ಬಟ್ಟಲು
• ಮೈದಾಹಿಟ್ಟು - 1/4 ಬಟ್ಟಲು
• ಉಪ್ಪು- ರುಚಿಗೆ ತಕ್ಕಷ್ಟು
• ಬೇಕಿಂಗ್ ಪೌಡರ್- ಸ್ವಲ್ಪ
• ಅರಿಶಿನಪುಡಿ- ಸ್ವಲ್ಪ
• ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1 ಸಣ್ಣ ಬಟ್ಟಲು
• ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 1 ಸಣ್ಣ ಬಟ್ಟಲು
• ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
• ಅಚ್ಚ ಖಾರದ ಪುಡಿ- 1/4 ಚಮಚ
• ಕಾಳುಮೆಣಸಿನ ಪುಡಿ - ಸ್ವಲ್ಪ
• ಬೆಣ್ಣೆ, ಎಣ್ಣೆ, ತುಪ್ಪ- 1 ಚಮಚ
• ಬ್ರೆಡ್- 1-2
ಮಾಡುವ ವಿಧಾನ
•ಮೊದಲಿಗೆ ಪಾತ್ರೆಯೊಂದಕ್ಕೆ ಕಡಲೆಹಿಟ್ಟು, ಮೈದಾಹಿಟ್ಟು, ಉಪ್ಪು, ಬೇಕಿಂಗ್ ಪೌಡರ್, ಅರಿಶಿನಪುಡಿ ಹಾಗೂ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
•ನಂತರ ಇದಕ್ಕೆ ಈರುಳ್ಳಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಅಚ್ಚ ಖಾರದ ಪುಡಿ, ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಹಿಟ್ಟು ತಯಾರು ಮಾಡಿಕೊಳ್ಳಬೇಕು.
•ಬಳಿಕ ಒಲೆಯ ಮೇಲೆ ಪ್ಯಾನ್ ಇಟ್ಟು ಇದಕ್ಕೆ ಸ್ವಲ್ಪ ಬೆಣ್ಣೆ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಹರಡಬೇಕು.
ನಂತರ ಈಗಾಗಲೇ ತಯಾರಿಸಿಕೊಂಡ ಹಿಟ್ಟನ್ನು ದೋಸೆ ರೀತಿ ಹಾಕಿ ಒಂದು ಬದಿಯಲ್ಲಿ ಕೆಂಪಗೆ ಸುಡಬೇಕು.
ಬಳಿಕ ಮತ್ತೊಂದು ಬದಿಯ ಮೇಲೆ ಬ್ರೆಡ್ ಪೀಸ್ ಇಟ್ಟು ಕೆಂಪಗೆ ಸುಟ್ಟು ಮಡಚಿದರೆ, ರುಚಿಕರವಾದ ಬ್ರೆಡ್ ಆಮ್ಲೆಟ್ ಸವಿಯಲು ಸಿದ್ಧ.
PublicNext
24/11/2020 01:02 pm