ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಟಾಪ್ ಮೋಸ್ಟ್ ನಟಿಯರ ಸಾಲಿನಲ್ಲಿ ಮಿಂಚುತ್ತಿದ್ದ ಐಶ್ವರ್ಯ ರೈ ತಮ್ಮ ಮೇಕಪ್ ನಿಂದಲೇ ಹಲವರ ಗಮನ ಸೆಳೆಯುತ್ತಿದ್ದರು.
ಐಶ್ವರ್ಯ ರೈ ರವರ ಸೌಂದರ್ಯ ಹೆಚ್ಚಾಗಲು ಅವರ ತುಟಿಗಳು ಮತ್ತು ಹಾಕಿಕೊಳ್ಳುತ್ತಿದ್ದ ಲಿಪ್ಸ್ಟಿಕ್ ಕೂಡ ಒಂದು ಕಾರಣ.
ಲಿಪ್ ಸ್ಟಿಕ್ ನ ಸರಿಯಾದ ಶೇಡ್ ಆಯ್ಕೆ ಮಾಡಿ
ನಿಮ್ಮ ಮುಖ ಹಾಗೂ ತ್ವಚೆಯ ಬಣ್ಣಕ್ಕೆ ಮ್ಯಾಚ್ ಆಗುವಂತಹ ಸರಿಯಾದ ಬಣ್ಣದ ಲಿಪ್ ಸ್ಟಿಕ್ ಆಯ್ಕೆ ಮಾಡಿ.
ಇದರಿಂದ ನಿಮ್ಮ ಮುಖ ಹೊಳಪಿನಿಂದ ಕೂಡಿರಬೇಕು ಮತ್ತು ದೂರದಿಂದ ನೋಡಿದರೂ ಮುಖದ ಬಣ್ಣ ಮಾಸಿದಂತೆ ಕಾಣಬಾರದು.
ಲೈನರ್ ಬಳಕೆ ಮಾಡಿ
ಲಿಪ್ ಸ್ಟಿಕ್ ಬಳಕೆ ಮಾಡಿದ ಮೇಲೆ ಲಿಪ್ ಲೈನರ್ ಬಳಕೆ ಮಾಡುವುದನ್ನು ಮರೆಯಬೇಡಿ. ಇದರಿಂದ ನೀವು ಹಾಕಿಕೊಂಡ ಲಿಪ್ ಸ್ಟಿಕ್ ದಟ್ಟವಾಗಿ ನಿಮ್ಮ ತುಟಿಗಳ ಮೇಲೆ ಕೂರುತ್ತದೆ.
ಬೇರೆಯವರು ನಿಮ್ಮನ್ನು ನೋಡಿದಾಗ ನಿಮ್ಮ ಮುಖದ ಹೊಳಪು ಎದ್ದು ಕಾಣುವಂತೆ ಮಾಡುತ್ತದೆ.
ಅದರಲ್ಲೂ ಸಂಜೆಯ ಪಾರ್ಟಿಯ ಸಮಯದಲ್ಲಿ ಬೆಳಕಿನ ಪ್ರಕಾಶಮಾನಕ್ಕೆ ತಕ್ಕಂತೆ ನಿಮ್ಮ ಸೌಂದರ್ಯ ದುಪ್ಪಟ್ಟಾಗುತ್ತದೆ.
ಹಲ್ಲುಗಳಿಗೆ ಲಿಪ್ ಸ್ಟಿಕ್ ತಾಗದಂತೆ ನೋಡಿಕೊಳ್ಳಿ
ಗಾಢವಾದ ಬಣ್ಣ ಹೊಂದಿರುವ ಲಿಪ್ ಸ್ಟಿಕ್ ಗಳು ಹಲ್ಲುಗಳನ್ನು ಕಲೆ ಕಟ್ಟುವಂತೆ ಮಾಡುತ್ತವೆ.
ಹಾಗಾಗಿ ಲಿಪ್ಸ್ಟಿಕ್ ಹಚ್ಚಿಕೊಳ್ಳುವಾಗ ನಿಮ್ಮ ಬಾಯಿಯ ಮೇಲ್ಭಾಗದ ಮತ್ತು ಕೆಳ ಭಾಗದ ತುಟಿಯನ್ನು ಇಂಗ್ಲಿಷ್ ಅಕ್ಷರದ ' O ' ಆಕಾರದಂತೆ ಮಾಡಿಕೊಳ್ಳಿ.
ಲಿಪ್ ಸ್ಟಿಕ್ ಹಚ್ಚುವಾಗ ತುಟಿಗಳ ಮಧ್ಯೆ ನಿಮ್ಮ ತೋರು ಬೆರಳನ್ನು ಇಟ್ಟುಕೊಳ್ಳಿ.
ಇದರಿಂದ ಬೆರಳುಗಳಿಗೆ ಲಿಪ್ ಸ್ಟಿಕ್ ಅಂಟಿದರೂ ಕೂಡ ಹಲ್ಲುಗಳಿಗೆ ತಾಗುವುದಿಲ್ಲ.
ಲಿಪ್ ಸ್ಟಿಕ್ ನ ಟೆಕ್ಸ್ಚರ್ ಬಗ್ಗೆ ಗಮನ ಹರಿಸಿ
ದಪ್ಪ ತುಟಿ ಹೊಂದಿರುವವರು ಲಿಪ್ ಸ್ಟಿಕ್ ಹಚ್ಚುವಾಗ ಸ್ವಲ್ಪ ಪ್ರಮಾಣದಲ್ಲಿ ಕೇವಲ ಒಂದು ಬಾರಿ ಬಳಕೆ ಮಾಡುವುದರಿಂದ ತುಟಿಗಳ ಸೌಂದರ್ಯ ಹೆಚ್ಚಾಗುತ್ತದೆ.
ಅದೇ ರೀತಿ ಸಣ್ಣದಾದ ಗಾತ್ರದ ತುಟಿಗಳನ್ನು ಹೊಂದಿರುವವರು ಲಿಪ್ ಸ್ಟಿಕ್ ಅನ್ನು ಎರಡು - ಮೂರು ಬಾರಿ ಮೇಲೆ ಮೇಲೆ ಹಚ್ಚುವುದರಿಂದ ತುಟಿಗಳ ಗಾತ್ರ ದಪ್ಪನಾದ ರೀತಿಯಲ್ಲಿ ಕಂಡು ಮುಖದ ಸೌಂದರ್ಯ ಹೆಚ್ಚಾಗುತ್ತದೆ.
PublicNext
12/11/2020 01:36 pm