ಇತ್ತೀಚ್ಚಿನ ಆಹಾರದ ಪದ್ದತಿಯೂ ಅಥವಾ ಜೀವನ ಶೈಲಿಯೂ ಗೊತ್ತಿಲ್ಲ. ಎಲ್ಲರೂ ತೂಕ ಇಳಿಸಲು ಒಂದಿಲೊಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ.
ಯಾರೆಲ್ಲ ತೂಕ ಇಳಿಸಲು ಪ್ರಯತ್ನಿಸುತ್ತಿರುವಿರೋ ನಿಮಗಾಗಿ ಇಲ್ಲಿದೆ ಒಂದು ಸಿಂಪಲ್ಲ ಟ್ರಿಕ್ಸ್.
ಹೌದು ಹಲವು ತರಕಾರಿಗಳ ಜ್ಯೂಸ್ ಗಳಿಂದ ದೇಹ ತೂಕ ಇಳಿಸುವುದು ಮಾತ್ರವಲ್ಲ ಮಧುಮೇಹ, ಬೊಜ್ಜು ಮೊದಲಾದ ಆರೋಗ್ಯ ಸಮಸ್ಯೆ ಇರುವವರಿಗೂ ತೂಕ ಇಳಿಸಲು ಸಹಕಾರಿ.
ಕ್ಯಾರೆಟ್ ಹಾಗೂ ಕಿತ್ತಳೆಯ ಜ್ಯೂಸ್ ತಯಾರಿಸಿ ಕುಡಿಯುವುದು ಅತ್ಯುತ್ತಮ ಬೆಳಗಿನ ಉಪಹಾರವಾಗಬಲ್ಲದು.
ಕ್ಯಾರೆಟ್ ಮತ್ತು ಕಿತ್ತಳೆಯಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಕಡಿಮೆ ಕ್ಯಾಲೊರಿ ಹೊಂದಿದ್ದು ಬೆಳಗಿನ ವ್ಯಾಯಾಮ ಮುಗಿದ ಬಳಿಕ ಇದನ್ನು ಸೇವಿಸುವುದು ಒಳ್ಳೆಯದು.
ಕಡಿಮೆ ಕ್ಯಾಲೊರಿ ಹೊಂದಿರುವ ತರಕಾರಿಗಳಲ್ಲಿ ಬೀಟ್ ರೂಟ್ ಕೂಡಾ ಒಂದು.
ಇದರಲ್ಲಿ ಕಡಿಮೆ ಕ್ಯಾಲೊರಿ ಇದ್ದು ಇದರ ಜ್ಯೂಸ್ ಗೆ ಚಿಟಿಕೆ ಉಪ್ಪು ಹಾಗೂ ಆಲಿವ್ ಆಯಿಲ್ ಬೆರೆಸಿ ಕುಡಿಯಬಹುದು.
ಸಾಕಷ್ಟು ನೀರಿನಂಶ ಹೊಂದಿರುವ ಸೌತೆಕಾಯಿಗೆ ಕಿವಿ ಹಣ್ಣು ಬೆರೆಸಿ ಜ್ಯೂಸ್ ತಯಾರಿಸಿ ಕುಡಿದರೆ ದೇಹಕ್ಕೆ ಕಡಿಮೆ ಕಾರ್ಬೊಹೈಡ್ರೇಟ್ ಗಳು ಸಿಕ್ಕಿ ನಿಮ್ಮ ತೂಕ ಕಳೆದುಕೊಳ್ಳುವುದು ಸುಲಭವಾಗುತ್ತದೆ.
ಟೊಮೆಟೊ ಹಣ್ಣಿನ ರಸದಲ್ಲೂ ವಿಟಮಿನ್ ಸಿ ಹೇರಳವಾಗಿದ್ದು ಡಯಟ್ ಮಾಡುವವರು ವಾರಕ್ಕೆರಡು ಬಾರಿ ಸೇವಿಸುವುದು ಒಳ್ಳೆಯದು.
PublicNext
04/11/2020 03:51 pm