ಫ್ಯಾಶನ್ ಜಗತ್ತಿನಲ್ಲಿ ಕ್ಷಣಿಕದ ಸಂತೋಷಕ್ಕಾಗಿ ಹಲವರು ಶಾಶ್ವತ ಸಮಸ್ಯೆಯನ್ನು ಬರಮಾಡಿಕೊಳ್ಳುತ್ತಾರೆ.
ಹೌದು ಹೈಹೀಲ್ಡ್ಸ್ ಹಾಕುವುದೆಂದರೆ ಎಲ್ಲರಿಗೂ ಇಷ್ಟವೇ, ಅದರೆ ಹೆಚ್ಚು ಹೊತ್ತು ಹೀಲ್ಸ್ ಹಾಕುವುದರಿಂದ ಬೆನ್ನಿನ ಸಮಸ್ಯೆ ಕಾಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಬೆನ್ನು, ಕಾಲ್ಬೆರಳು ಮತ್ತು ಕಾಲು ಗಂಟುಗಳ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ವೈದ್ಯರೂ ದೃಢಪಡಿಸಿದ್ದಾರೆ.
ನಿತ್ಯ ಹೈ ಹೀಲ್ಸ್ ಧರಿಸುವುದರಿಂದ ನೀವು ನಡೆಯುವ ರೀತಿಯೇ ಬದಲಾಗುತ್ತದೆ. ದೇಹ ತೂಕವನ್ನು ಬ್ಯಾಲೆನ್ಸ್ ಮಾಡಲು ಕಾಲುಗಳು ಒದ್ದಾಡುತ್ತವೆ. ಮೂಳೆಗಳ ವಿನ್ಯಾಸವೂ ಬದಲಾಗುತ್ತದೆ.
ಹೀಲ್ಸ್ ಪಾದವನ್ನು ಮೇಲೆ ಕೆಳಗಿನ ಭಂಗಿಯಲ್ಲಿ ಇಟ್ಟುಕೊಳ್ಳುವುದರಿಂದ ಕಾಲ್ಬೆರಳಿಗೆ ಸರಿಯಾಗಿ ರಕ್ತ ಪರಿಚಲನೆ ಸಾಧ್ಯವಾಗುವುದಿಲ್ಲ.
ಶೇ.85ರಷ್ಟು ಮಹಿಳೆಯರಿಗೆ ಹೈ ಹೀಲ್ಸ್ ಧರಿಸುವುದು ಇಷ್ಟವಂತೆ. ಕೆಲಸಕ್ಕೆ ಹೋಗುವ ಮಹಿಳೆಯರು ನಿತ್ಯ ಇದನ್ನು ಬಳಸುತ್ತಾರೆ ಎನ್ನಲಾಗಿದೆ.
ನಿತ್ಯ ಹೈಹೀಲ್ಸ್ ಧರಿಸುವ ಬದಲು ಅಪರೂಪಕ್ಕೊಮ್ಮೆ ಅಂದರೆ ಔಟಿಂಗ್ ಹೋಗುವಾಗ, ಸಮಾರಂಭಗಳಿಗೆ ತೆರಳುವಾಗ ಮಾತ್ರ ಹೀಲ್ಸ್ ಧರಿಸಿದರೆ ನಿಮ್ಮ ಆರೋಗ್ಯ ಸುಖಕರವಾಗಿರುತ್ತದೆ.
PublicNext
01/11/2020 03:32 pm