ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಪೆಷಲ್ ಬಟಾಣಿ ಉಸ್ಲಿ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು:

ಬಟಾಣಿ – 1 ಕಪ್

(ಹಸಿ ಅಥವಾ ಒಣಗಿದ್ದು, ಒಣಗಿದ ಬಟಾಣಿಯನ್ನು 6-7 ಗಂಟೆ ನೀರಿನಲ್ಲಿ ನೆನೆಸಬೇಕು)

ಹಸಿಮೆಣಸಿನಕಾಯಿ – 2-3

ಕೆಂಪು ಮೆಣಸಿನಕಾಯಿ – 2

ಸಾಸಿವೆ – ಸ್ವಲ್ಪ

ಕರಿಬೇವು – ಸ್ವಲ್ಪ

ಇಂಗು – ಚಿಟಿಕೆ

ಕೊಬ್ಬರಿ ತುರಿ – 3 ಸ್ಪೂನ್

ಜೀರಿಗೆ ಪುಡಿ – ಚಿಟಿಕೆ

ಪೆಪ್ಪರ್ ಪುಡಿ – ಚಿಟಿಕೆ

ಎಣ್ಣೆ – 2 ಸ್ಪೂನ್

ಉಪ್ಪು – ರುಚಿಗೆ ತಕ್ಕಷ್ಟು

ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ

* ಒಣಗಿದ ಬಟಾಣಿಯಾದರೇ ಅದನ್ನು 6-7 ಗಂಟೆ ಕಾಲ ನೀರಿನಲ್ಲಿ ನೆನೆಸಿ ಬೇಯಿಸಿಕೊಳ್ಳಬೇಕು.

* ಹಸಿ ಬಟಾಣಿಯಾದರೂ ಹಾಗೆಯೆ ಬೇಯಿಸಿಕೊಳ್ಳಬೇಕು.

* ಬಟಾಣಿ ಬೇಯಿಸಿದ ಮೇಲೆ ಸೋಸಿಕೊಳ್ಳಿ.

* ಈಗ ಒಂದು ಪ್ಯಾನ್ಗೆ ಎಣ್ಣೆ ಹಾಕಿ, ಕಾದ ಮೇಲೆ ಸಾಸಿವೆ, ಇಂಗು, ಕರಿಬೇವು ಹಾಕಿ.

* ಬಳಿಕ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಮುರಿದ ಕೆಂಪು ಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿ.

* ಈಗ ನೀರಿಲ್ಲದಂತೆ ಸೋಸಿಕೊಂಡ ಬಟಾಣಿಯನ್ನು ಪ್ಯಾನ್ಗೆ ಹಾಕಿ ಮಿಕ್ಸ್ ಮಾಡಿ.

* 2 ನಿಮಿಷ ಆದ್ಮೇಲೆ ಅದಕ್ಕೆ ಜೀರಿಗೆ, ಪೆಪ್ಪರ್ ಪುಡಿ, ಕೊಬ್ಬರಿ ತುರಿ ಸೇರಿಸಿ.. ಮಿಕ್ಸ್ ಮಾಡಿ.. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿದ್ರೆ ಕಾಫಿ ಜೊತೆ ಸವಿಯಲು ಮಸಾಲೆ ಬಟಾಣಿ ಉಸ್ಲಿ ರೆಡಿ.

Edited By : Nirmala Aralikatti
PublicNext

PublicNext

31/10/2020 05:40 pm

Cinque Terre

25.39 K

Cinque Terre

1