ಕೊಪ್ಪಳ: ಕಾಂಗ್ರೆಸ್ ನಾಯಕರಿಗೆ ಚುನಾವಣೆ ಬಂದಾಗ ಜನ ನೆನಪಾಗ್ತಾರೆ. ಈ ಹಿಂದೆ ಕಾಂಗ್ರೆಸ್ ನಡಿಗೆ, ಕೃಷ್ಣೆ ಕಡೆಗೆ ಅಂತಾ ಪಾದಯಾತ್ರೆ ಮಾಡಿದ್ರು.ನೀರು ಹಿಡಿದು ಪ್ರಮಾಣ ಮಾಡಿ 50 ಸಾವಿರ ಕೋಟಿ ಅನುದಾನ ಕೊಡ್ತಿವಿ ಅಂತಾ ಹೇಳಿದ್ರು.
ಕೃಷ್ಣ ಬೇಸಿನ್‌ಗೆ 50 ಸಾವಿರ ಕೋಟಿ ಅನುದಾನ ಕೊಡ್ತಿವಿ ಅಂದ್ರು. ಅಧಿಕಾರಕ್ಕೆ ಬಂದ ಕೂಡಲೇ ಇದೆಲ್ಲ ಮರೆತು ಬಿಟ್ಟರು ಎಂದು ಜನಸಂಕಲ್ಪ ಯಾತ್ರೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಮಾತು ತಿರುಗಿಸಿ ನಂತರ ಎಲ್ಲ ಯೋಜನೆಗೆ ಸೇರಿ 50 ಸಾವಿರ ಕೋಟಿ ಕೊಟ್ಟಿದೀವಿ ಅಂತಾ ಹೇಳ್ತಿದ್ದಾರೆ. ಅವರು ಮತ್ತೇ ಇಲ್ಲಿಗೆ ಬಂದರೆ ಜನ ಅವರನ್ನು ಕೇಳಬೇಕಿದೆ .ನಿಮ್ಮ ಪಾದಯಾತ್ರೆ ಏನೂ ಕೆಲಸ ಮಾಡುವುದಿಲ್ಲ.ಹೈ-ಕ ವನ್ನ ಕಲ್ಯಾಣ ಕರ್ನಾಟಕ ಅಂತಾ ಮಾಡಿದ್ವಿ. ಈ ಭಾಗಕ್ಕೆ 3 ಸಾವಿರ ಕೋಟಿ ಅನುದಾನ ನೀಡಿದ್ದೇವೆ. ಕೊರೊನಾದಂತಹ ಸಂಕಷ್ಟದಲ್ಲೂ ಅಭಿವೃದ್ಧಿ ಕಾರ್ಯ ನಿಂತಿಲ್ಲ.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಭಾಷಣದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಇತ್ತು. ಬಜೆಟ್ ಪುಸ್ತಕದಲ್ಲಿ ಮಾತ್ರ ಹಣ ಮೀಸಲು ಇಟ್ಟಿದ್ರು.ಆದ್ರೆ, ಬಿಜೆಪಿ ಸರ್ಕಾರ ದಲಿತರ ಶಿಕ್ಷಣಕ್ಕೆ ಬದ್ಧವಾಗಿದೆ. ನೀವು ಅಹಿಂದಕ್ಕೆ ಏನೂ ಮಾಡಿಲ್ಲ ಎಂದು ಸಿದ್ದರಾಮಯ್ಯರ ವಿರುದ್ದ ಟೀಕೆ ಮಾಡಿದ್ರು. ಇನ್ನೂ ನಾನು ಕನಕದಾಸರ ನಾಡಿನಿಂದ ಬಂದವನು. ನಾವು ಕನಕದಾಸರ ವಿಚಾರ ಇಡೀ ರಾಜ್ಯಕ್ಕೆ ಬಿಂಬಿಸ್ತಿದೀವಿ. ನಿಜವಾದ ಸಾಮಾಜಿಕ ನ್ಯಾಯ ಬಿಜೆಪಿಗರು ಕೊಡ್ತಿದ್ದಾರೆ. ಸಾಮಾಜಿಕ ನ್ಯಾಯ ಎಂಬುದು ಕಾಂಗ್ರೆಸ್ ಗೆ ಭಾಷಣದ ಸರಕಾಗಿದೆ.ಸುಮಾರು 20 ಸಾವಿರ ಕೋಟಿ ವಕ್ಫ ಆಸ್ತಿಯನ್ನ ಕಾಂಗ್ರೆಸ್ ನಾಯಕರು ನುಂಗಿ ನೀರು ಕುಡಿದಿದ್ದಾರೆ. ಈ ಬಗ್ಗೆ ಈಗಾಗಲೇ ಲೋಕಾಯುಕ್ತ ವರದಿ ಬಂದಿದೆ. ನೀವು ಅಲ್ಪ ಸಂಖ್ಯಾತರಿಗೂ ಮೋಸ ಮಾಡಿದ್ದೀರಿ.
ಕಾಂಗ್ರೆಸ್ ಅಂದ್ರೆ ಬ್ರಿಟೀಷರ ವಂಶಾವಳಿ. ಬ್ರಿಟಿಷರಂತೆ ಜಾತಿ ವಿಷ ಬೀಜ ಬಿತ್ತಿದವರು. ಸಿದ್ದರಾಮಯ್ಯ ನನ್ನನ್ನು ಬೊಮ್ಮಾಯಿ ನಮ್ಮ ಗಿರಾಕಿ ಅಂತಾ ಹೇಳಿದ್ದಾರೆ. ಸಿದ್ದರಾಮಯ್ಯ ನೀವು ಯಾವ ಗಿರಾಕಿ, ಈಗ ನೀವು ಎಲ್ಲಿದ್ದೀರಿ?. ನೀವು ಕೂಡ ಜನತಾ ಪಕ್ಷದಲ್ಲಿ ಇದ್ದ ಗಿರಾಕಿಯೇ. ನೀವು ಈ ಹಿಂದೆ ಸೋನಿಯಾ ಗಾಂಧಿ ಬಗ್ಗೆ ಏನೆಲ್ಲ ಮಾತಾಡಿದ್ದೀರಿ ಗೊತ್ತಾ? ಎಂದು ಹಳೇ ಟೇಪ್ ತೆರೆದು ನೋಡಿದ್ರೆ ಎಲ್ಲ ಗೊತ್ತಾಗುತ್ತೆ ಎಂದು ಬೊಮ್ಮಾಯಿ ಅವರು ಸಿದ್ದರಾಮಯ್ಯ ಕಾಲೆಳೆದ್ರು.
PublicNext
12/10/2022 10:28 pm