ಕೊಪ್ಪಳ: ಇಂದು ಕೊಪ್ಪಳ ಜಿಲ್ಲೆಯಲ್ಲಿಬಿಜೆಪಿಯ ಜನಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಕೆಎಂಎಫ್ ಕೇಂದ್ರದ ಮುಂಭಾಗದ ಗ್ರೌಂಡಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಸಿಎಂ ಬಸವರಾಜ ಬೋಮ್ಮಾಯಿ,ಮಾಜಿ ಸಿಎಂ ಯಡಿಯೂರಪ್ಪ ಸೇರಿ ಹಲವರು ಭಾಗಿಯಾಗಲಿದ್ದು,
ಮಳೆಯ ಭೀತಿಯ ನಡುವೆ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಕೊಳ್ಳಲಾಗಿದೆ.
ಇನ್ನು 2018 ರಲ್ಲಿ ಬಿಜೆಪಿ ಸೋಲು ಅನುಭವಿಸಿರುವ ಕ್ಷೇತ್ರ ಇದಾಗಿದ್ದು, ಬಿಜೆಪಿ ಸೋತಿರುವ ಕ್ಷೇತ್ರದಲ್ಲಿ ಬಿಜೆಪಿ ರಣಕಹಳೆ ಆರಂಭಿಸಿದೆ.ಸುಮಾರು 30 ಸಾವಿರಕ್ಕೂ ಅಧಿಕ ಜನ ಸೇರುವ ಸಾಧ್ಯತೆ ಇದ್ದು,
ಮಧ್ಯಾಹ್ನ 3 ಗಂಟೆಗೆ ಜನಸಂಕಲ್ಪ ಸಮಾವೇಶ ಆರಂಭವಾಗಲಿದೆ. ಸಮಾವೇಶ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಹಮ್ಮಿಕೊಳ್ಳಲಾಗಿದ್ದು, ಸುಮಾರು 500 ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.
PublicNext
12/10/2022 11:11 am